ಮಿಮಿಕ್ರಿ ದಯಾನಂದ್ ಅವರ ಡಬ್ಬಿಂಗ್ ಅನುಭವಗಳು
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 25 ಡಬ್ಬಿಂಗ್ ಕಲಾವಿದನಾಗಿಯೂ ನಾನು ಕೆಲಸ ಮಾಡಿದ್ದೇನೆ. ಪ್ರೇಮರಾಜ್ಯ ಸಿನಿಮಾದಲ್ಲಿ ಅಂಬರೀಷ್ಗೆ ಪೂರ್ತಿ ಸಿನಿಮಾ ಡಬ್ ಮಾಡಿದ್ದೇನೆ. ‘ಆಪರೇಷನ್ ಅಂತ’ದಲ್ಲಿ ಎರಡು ರೀಲ್ ಅಳಿಸಿ ಹೋಗಿತ್ತು. ಉಪೇಂದ್ರ ಅವರು ಅರ್ಜೆಂಟಾಗಿ ಸೆನ್ಸಾರ್ಗೆ ಕೊಡಬೇಕು ಎಂದು ನನ್ನ ಬಳಿ ಅದನ್ನು ಮಾಡಿಸಿದ್ರು. ಅಂಬರೀಷ್ ಅವರು ಬಂದ ಮೇಲೆ ಅದನ್ನು ನೋಡಿದ್ರು. ಎರಡು ಸಲ ಸಿನಿಮಾ ನೋಡಿ ಅವರು ಏನು ಹೇಳಿಲ್ಲ. ನಂತರ ಉಪೇಂದ್ರ ಅವರೇ ಹೋಗಿ ಆ ರೀಲ್ನಲ್ಲಿ ಇರುವುದು ನಿಮ್ಮ ಧ್ವನಿಯಲ್ಲ ಎಂದು ಹೇಳಿದ್ರು. ಅದಕ್ಕವರು ನನಗೆ ಗೊತ್ತಾಗಿಲ್ಲ ಯಾವನಿಗೆ ಗೊತ್ತಾಗುತ್ತದೆ ಇರಲಿ ಬಿಡು ಎ