ಅಗುಂಬೆಯಲ್ಲಿ ನಾವು ಮಾಡಿದ್ದ ಫೆಸಿಲಿಟೀಸ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 97

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ರಮೇಶ್ ಭಟ್ ಆಗ ತಾನೆ ಟೀಮಲ್ಲಿ ಜಾಯ್ನ್ ಆಗಿದ್ರು. ನಾನು ರಮೇಶ್ ಭಟ್ ಹೋದ್ವಿ ರೆಕ್ಕಿ ತರ ಏನಿದೆ ಅಂತ. ನೋಡಿದ್ರೆ ಅಲ್ಲಿ ವಾಸ ಮಾಡಕ್ಕೆ ಏನೂ ಇಲ್ಲ. ನಾನು ಮತ್ತೆ ರಮೇಶ್ ಭಟ್ ಮುಖ ನೋಡ್ಕೊಂಡ್ವಿ. ಇಷ್ಟು ಜನ ಇಲ್ಲಿ ವಾಸ ಮಾಡ್ತೀವಿ? ಹೆಂಗೋ ಅಂತ. ಎಲ್ಲಾ ಮನೆಗಳಲ್ಲೂ ಜಗ್ಲಿ ಇತ್ತು ಅವ್ರ ಹತ್ರ ಕೇಳ್ಕೊಂಡು ಜಗ್ಲಿಯಲ್ಲೇ ಮಲ್ಕೊಳೋದು. ಬಟ್ ಬೇಸಿಕ್ ನೆಸೆಸಿಟೀಸ್ ಏನಿದ್ಯೋ, ಇನಕ್ಲೂಡಿಂಗ್ ಟೆಂಪ್ರವರಿ ಟಾಯ್ಲೆಟ್, ಅದನ್ನೂ ಮಾಡಿದ್ವಿ. ಹೈಜಿನಿಕ್ ಆಗಿ. ಆಂಡ್ ವಿ ಹ್ಯಾಡ್ ಅ ಟೀಮ್ ಆಫ್ ಲೋಕಲ್ ಬಾಯ್ಸ್, ವೇರ್ ವಿ ಗೇವ್ ದೆಮ್ ಲಾಟ್ ಆಫ್ ಎಂಪ್ಲಾಯ್ಮೆಂಟ್, ಎಲ್ರಿಗೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಏನು ಕೆಲ್ಸ ಅಂದ್ರೆ? 200 ಲೀಟರ್ ಕ್ಯಾನ್ಗಳಲ್ಲಿ ನೀರು ತುಂಬ್ಸಿ ಒಲೆ ಹಚ್ಚೊದು. ಎಲ್ರಿಗೂ ಬಿಸಿ ನೀರು ಇತ್ತು ಅಲ್ಲಿ ಕೂಡ. ನಾವು ನೂರೈವತ್ತು ಜನ ಇದ್ರೆ, ಎಲ್ಲರಿಗೂ ಬಿಸಿ ನೀರು ಇರ್ತಿತ್ತು. ಟಾಯ್ಲೆಟ್ ಎಲ್ಲಾ ದಿನಾಲು ಫ್ಲೆಷ್ ಮಾಡಿ ಕ್ಲೀನ್ ಮಾಡ್ಸಿಡ್ತಿದ್ವಿ. ಮತ್ತೆ ಫ್ಯಾನ್ ಬೇಕು, ಫೈವ್ ಸ್ಟಾರ್ ಫೆಸಿಲಿಟೀಸ್ ಬೇಕು ಅಂದ್ರೆ ಇರ್ತಿರ್ಲಿಲ್ಲ. ಬೇಸಿಕ್ ನೀಡ್ಸ್ ಎಲ್ಲಾ ಇತ್ತು.

ಮೋಸ್ಟ್ ಹೈಜಿನಿಕ್ ಟಾಪ್ ಲೆವೆಲ್ ಊಟ. ಅದ್ರಲ್ಲಿ ಮಾತ್ರ ನೋ ಕಾಂಪ್ರಮೈಸ್. ನಮ್ಮಲ್ಲಿ, ನಾನು ಪ್ರೊಡ್ಯೂಸರ್ ಮಗ, ನನಿಗೆ ಸಪ್ರೇಟ್ ಊಟ ಆತರ ಏನೂ ಇಲ್ವೇ ಇಲ್ಲ. ಎಲ್ಲರೂ ಹೇಳ್ತಿದ್ರು “ಐವತ್ತು ರೂಪಾಯಿ ಅಕ್ಕಿನ ಡೈರಕ್ಟರ್ ಊಟ ಮಾಡ್ತಾನಂದ್ರೆ, ಒಬ್ಬ ಲೈಟ್ ಬಾಯ್ ಕೂಡ ಅದನ್ನೇ ತಿಂತಾನೆ. ಮತ್ತೆ ನಮ್ಮಲ್ಲೇ ರಂಗಪ್ಪ ಅಂತ ಕುಕ್ ಇದ್ದ, ಬೇರೆ ಎಲ್ಲೂ ಊಟಕ್ಕೆ ಡಿಪೆಂಡ್ ಆಗ್ತಿರ್ಲಿಲ್ಲ. ಅವ್ನಿಗೆ, ಇವತ್ತು ಐವತ್ತು ಜನರಿಗೆ ಊಟ, ಸಂಜೆ ಹದಿನೇಳು ಜನಕ್ಕೆ ಅಂದ್ರೆ, ಆಯ್ತಣ್ಣ ಮಾಡೋಣ ಅಂತಿದ್ದ. ಆ ತರ ಆಟಿಟ್ಯೂಡ್ ಅವ್ನದ್ದು. ಹೀ ಈಸ್ ಸ್ಟಿಲ್ ಲೈಕ್ ದಟ್. ಮತ್ತೆ ಎಲ್ಲಾ ಕೂಡಿ ಬಂದಿದ್ದು, ಇಟ್ ವಾಸ್ ಅಮೇಜಿಂಗ್. ಮತ್ತೆ ಚಿಕ್ಕ ಊರು ಆಗುಂಬೆ, ಸುಮಾರು ಜನ ಹೇಳಿದಾರೆ ನಿಮಗೆ ಅಲ್ಲಿ ಏನೂ ಇಲ್ಲ ಅಂತೆಲ್ಲ. ನಮ್ಮ ರಂಗಪ್ಪ ಅವ್ನು, ಅಲ್ಲಿ ದೊಡ್ಡ ಹಳೇ ಚೌಟ್ರಿ ಇತ್ತು, ಪಾಳು ಬಿದ್ದಿತ್ತು. ಪಂಚಾಯ್ತಿಯವ್ರಿಗೆ ಹೇಳಿ ಅವ್ರಿಗೆ ಡೊನೇಶನ್ ಕೊಟ್ಟು ಅದನ್ನೆಲ್ಲಾ ರಿಪೇರಿ ಮಾಡ್ಸಿ ಉಪಯೋಗಿಸಿ ಕೊಂಡ್ವಿ. ಆ ಜಾಗದಲ್ಲಿ ಸುಮಾರು 200 ಜನ ಮಲಗ ಬಹುದು. ಅಷ್ಟು ಜಾಗ ಇತ್ತು. ಪ್ಲಸ್ ಸುಮಾರು ಸಣ್ಣ ಸಣ್ಣ ಮನೆಗಳಲ್ಲಿ ಮತ್ತೆ ಪ್ರಾರ್ಥನ ಮಂದಿರ ಇತ್ತು. ಅಲ್ಲಿ ನಮ್ಮ ಯೂನಿಟ್ ಅವ್ರಿಗೆ. ಎಲ್ಲರಿಗೂ ಜಾಗ ಬೇಕಲ್ಲ. ನಮ್ಮ ಯೂನಿಟ್ ಅವ್ರೇ ನೂರಿಪ್ಪತ್ತು ಜನ ಇದ್ವಿ.


ಪರಮ್: ನೂರಿಪ್ಪತ್ತು ಜನ ಅಂದ್ರೆ, ದಟ್ ಈಸ್ ಬಿಗ್ಗರ್ ದೆನ್ ಸಿನಿಮಾ ಅಲ್ವಾ?


ಬದರಿನಾಥ್: ಹೌದು ಅಷ್ಟಿದ್ವಿ. ಲೈಟ್ ಬಾಯ್ಸ್, ಪ್ರೊಡಕ್ಷನ್ ಹುಡುಗ್ರು, ಆರ್ಟ್ ಡಿಪಾರ್ಟ್ಮೆಂಟ್, ಕಾಸಟ್ಯೂಮ್ ಅವ್ರು, ಆರ್ಟಿಸ್ಟ್ ಗಳು, ಜ್ಯೂನಿಯರ್ಸ್. ಜ್ಯೂನಿಯರ್ಸ್ ಅಲ್ಲ ಅವ್ರು ಸ್ಟೇಜ್ ಆರ್ಟಿಸ್ಟ್ ಪಾಪ. ಬಹಳ ಒಳ್ಳೆ ಸ್ಟೇಜಿಂದ ಬಂದವ್ರು. ಜ್ಯೂನಿಯರ್ಸ್ ಅನ್ನೋದು ತಪ್ಪು. ಅವ್ರೂ ಅಷ್ಟೇ 25 ಜನ ಇದ್ರು. ಅವ್ರು ಯಾವಾಗ್ಲೂ ನಮ್ಮ ಜೊತೆನೇ ಇರುವವ್ರು. ಎಲ್ಲರಿಗೂ ಕಮ್ಫರ್ಟ್ ಬೇಕಲ್ವಾ?


ಯಾವುದೋ ಒಂದು ಕಡೆ ಹೋಗಿದ್ದೀವಿ ಅಂತ ಬಿಟ್ಬಿಡಕ್ಕಾಗಲ್ವಲ್ಲ. ಬಹಳ ಕಷ್ಟ ಇತ್ತು, ಆದ್ರೆ ಮಾಡಿದ್ವಿ. ಅದಿಕ್ಕೆ ಎಷ್ಟೋ ಜನ ಹುಡುಗ್ರು ನಮ್ಗೆ ಹೇಳ್ತಿದ್ರು, “ಇದೇನ್ಸಾರ್, ಮಾಲ್ಗುಡಿ ಡೇಸ್ ಅಂತ ಯಾಕೆ ಕರಿತೀರ ಸರ್?” ಯಾಕಪ್ಪಾ ಅಂದ್ರೆ, ಮಾಲ್ಗುಡಿ ನೈಟ್ಸ್ ಅಂತ ಕರಿರಿ ಸಾರ್, ರಾತ್ರಿಯೆಲ್ಲಾ ಚಚ್ತೀರ ಸಾರ್ ನೀವು. ಮೂರು ಗಂಟೆ ಆದ್ರೂ ಮಲ್ಗಕ್ಕೆ ಬಿಡಲ್ಲ, ಈತರ ಎಷ್ಟೋ ಸಲ ಆಗಿದೆ ಶಂಕರ್ ನಾಗ್ ಮೂರು ಗಂಟೆ ರಾತ್ರಿ ಪ್ಯಾಕಪ್ ಅಂತ ಹೇಳ್ದಾಗ, ನಾವು ಪ್ರೊಡಕ್ಷನ್ ಅವ್ರು ಹೋಗಿ ಕೇಳ್ಬೇಕಲ್ಲ, ನಾಳೆ ಎಲ್ಲಿ ಸಾರ್ ಶೂಟಿಂಗ್? ಎಷ್ಟೊತ್ತಿಗೆ ಅಂತ. ಅವ್ರು “ಬೆಳಗ್ಗೆ ಆರು ಗಂಟೆಗೆ ಫಸ್ಟ್ ಶಾಟ್” ಅಂತ ಹೇಳಿ ಹೋಗ್ತಾ ಇರೋರು. ನಾನು, ವೆಂಕಿ, ಜಗ್ಗ ಎಲ್ಲಾ ಮುಖ ನೋಡ್ಕೋತಿದ್ವಿ, ಏನೋ ಎಲ್ಲೋ ನಿದ್ರೆ ಅಂತ.


ಪರಮ್: ಶಂಕರ್ ಬರ್ತಿದ್ರಾ ಆನ್ ದ ಟೈಮ್?


ಬದರಿನಾಥ್: ಆನ್ ದ ಡಾಟ್ ಬರ್ತಿದ್ರು. ಎಲ್ಲಿಂದ ದೇವರು ಅವ್ರಿಗೆ ಆ ತರ ಎನರ್ಜಿ ಕೊಟ್ರೋ? ಫಾಸ್ಟ್ ಥಿಂಕಿಂಗ್ ಬ್ರೈನ್. ಅದೇ ತರ ಎಲ್ಲರೂ ಇದ್ರು ಟೀಮಲ್ಲಿ. ನೋಬಡಿ ವುಡ್ ಸೇ ನೋ.ಮುಂದುವರೆಯುವುದು…

44 views