ಅಜಗಜಾಂತರ ಸಿನಿಮಾಕ್ಕೆ ಕಾಶಿನಾಥ್‌ ಅವರು ಕೊಟ್ಟ ಸಂಭಾವನೆ?

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 14



ಅಜಗಜಾಂತರ ಸಿನಿಮಾಗೆ ನಲವತ್ತೈದು ದಿವ್ಸ ಶೂಟಿಂಗ್‍ಗೆ ಹೋದೆ ಸಾರ್. ಸಂಭಾವನೆ ಎಷ್ಟು ಇರ್ಬೋದು ಸಾರ್?


ಪರಮ್: ಎಷ್ಟು?


ಬ್ಯಾಂಕ್ ಜನಾರ್ಧನ್: 2000ರೂಪಾಯಿ.


ಪರಮ್; ನಲವತ್ತೈದು ದಿನಕ್ಕೆ?


ಬ್ಯಾಂಕ್ ಜನಾರ್ಧನ್: ಅವರು ಸಂಭಾವನೆ ಮಾತಾಡೋವಾಗ ನಾನು ಒಂದು ಮಾತು ಹೇಳ್ದೆ. “ಸಾರ್ ನಾನೇನೂ ಕೇಳೋದಿಲ್ಲ. ನೀವು ನನ್ನ ಕರ್ದು ಪಾರ್ಟ್ ಕೊಟ್ಟಿರೋದ್ರಿಂದ ಇದರಿಂದ ನಂಗೆ ಏನೋ ಒಳ್ಳೆದು ಆಗ್ಬೋದು ಅಂತ ಅನಿಸ್ತಾ ಇದೆ. ನೀವು ಒಂದು ರೂಪಾಯಿ ಕೊಟ್ರೂ ನಾನು ತಗೋತೀನಿ. ನಾನು ಸಂಭಾವನೆ ವಿಷಯ ಮಾತಾಡಲ್ಲ” ಅಂತ ಹೇಳ್ದೆ. ಹಾಗಾಗಿ ಅವರು ಪಿಚ್ಚರ್ ಮುಗಿದ ಮೇಲೆ 2000ರೂಪಾಯಿ ಕೊಟ್ರು. ಅವಾಗ ದಿನಕ್ಕೆ ಇಪ್ಪತ್ತು ರೂಪಾಯಿ ಕನ್ವೇಯನ್ಸ್ ಕೊಡ್ತಾ ಇದ್ರು. ನಮ್ಮದೇ ಬೈಕಲ್ಲಿ ಹೋಗ್ತಾ ಇದ್ದೆ.


ಪರಮ್: ಬುಲೆಟ್?


ಬ್ಯಾಂಕ್ ಜನಾರ್ಧನ್: ಅದರಲ್ಲಿ ಹೋಗಿ ಕೆಲ್ಸ ಮಾಡ್ತಾ ಇದ್ದೆ. ಪಿಚ್ಚರ್ ರಿಲೀಸ್ ಆಯ್ತು ಸಾರ್. ಪಿಚ್ಚರ್ ಸೂಪರ್ ಹಿಟ್ ಆಗೋಯ್ತು. ಅಜಗಜಾಂತರ ಸಿನಿಮಾ ಹಂಡ್ರಡ್ ಡೇಸ್ ಆಗೋಯ್ತು. ಆ ಟೈಮಲ್ಲಿ ಪಿಚ್ಚರ್ ಹಂಡ್ರಡ್ ಡೇಸ್ ಆದ್ಮೇಲೆ ಗಾಂಧೀನಗರದಲ್ಲಿ ಎಲ್ಲರ ಬಾಯಲ್ಲೂ ನಮ್ಮ ಮಾತು ಬಂತು. “ಹೇಯ್ ಯಾರೋ ಬ್ಯಾಂಕ್ ಜನಾರ್ಧನ್ ಅಂತೆ ಚನ್ನಾಗಿ ಮಾಡಿದ್ದಾನಂತೆ. ಹಂಡ್ರಡ್ ಡೇಸ್ ಆಗೋಯ್ತು ಪಿಚ್ಚರ್, ಕಾಮಿಡಿ ಪಿಚ್ಚರ್” ಅಂತೆಲ್ಲಾ ಆಯ್ತು.



ಮುಂದುವರೆಯುವುದು…

146 views