ಅಣ್ಣಮ್ಮ, ರಾಜ್ಯೋತ್ಸವ ಕಾರ್ಯಕ್ರಮಗಳೇ ನನಗೆ ಯೂನಿವರ್ಸಿಟಿ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 5ಕಾಮಿಡಿ ಮಾಡಿಕೊಂಡು ಬದುಕಬಹುದು ಎಂಬ ಕಲ್ಪನೆಯೇ ಆಗ ಇರಲಿಲ್ಲ. ಹಾಗಾಗಿ, ನನಗೆ ಮನೆಯಲ್ಲಿ ಯಾರ ಬೆಂಬಲವೂ ಇರಲಿಲ್ಲ. ಅದು ಅವರ ತಪ್ಪು ಎನ್ನಲೂ ಆಗುವುದಿಲ್ಲ. ಅವರಿಗೆ ನಾನು ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆ ಇತ್ತು.

ಐದನೇ ತರಗತಿಯಲ್ಲಿಯೇ ಎಲ್ಲರನ್ನೂ ಅನುಕರಣೆ ಮಾಡುತ್ತಿದ್ದೆ. ಆಗ ಶಾಲೆಯಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದೆ. ಮೈಸೂರಿನ ಸೇಂಟ್‌ ಮೆರೀಸ್‌ನಲ್ಲಿ ಫಾದರ್‌ ರಾಯ್‌ ಎಂದಿದ್ರು ಅವರನ್ನು ಅನುಕರಣೆ ಮಾಡಿದ್ದೆ. ಅವರು ಎದ್ದೇ ಹೋಗಿಬಿಟ್ಟರು. ಎಲ್ಲರಿಗೂ ನನ್ನ ಮೇಲೆ ಕೋಪ ಬಂತು. ಆದರೆ, ಸಿನಿಮಾಗಳಲ್ಲಿ ಬರುವ ತರಹ ಬಂದ ಅವರು ಒಂದು ಫೋಟೊವನ್ನು ನನಗೆ ಗಿಫ್ಟ್‌ ಕೊಟ್ಟು, ಈ ಪ್ರತಿಭೆಯನ್ನು ಮುಂದುವರಿಸು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ರು.


ನನ್ನನ್ನು ಗೆಲ್ಲಿಸಿರುವ ಯೂನಿವರ್ಸಿಟಿ ಎಂದರೆ, ರಾಜ್ಯೋತ್ಸವ, ಅಣ್ಣಮ್ಮ ದೇವಿ ಮತ್ತು ಗಣಪತಿ ಹಬ್ಬ. ಅಲ್ಲಿ ಕೊಟ್ಟಷ್ಟು ದುಡ್ಡು, ಪ್ರಶಸ್ತಿ, ಚಪ್ಪಾಳೆ ಇನ್ನು ಯಾರು ಕೊಟ್ಟಿಲ್ಲ. ಒಂದೊಂದು ಪ್ರಶಸ್ತಿಯ ಹಿಂದೆ ಒಂದೊಂದು ಕಥೆಯಿದೆ. ಹಾಗಾಗಿ ಎಲ್ಲವನ್ನೂ ಜೋಪಾನವಾಗಿ ಮನೆಯಲ್ಲಿಯೇ ಇಟ್ಟುಕೊಂಡಿದ್ದೇನೆ.
ಮುಂದುವರಿಯುವುದು...

15 views