ಅಣ್ಣಾವ್ರ ಆತ್ಮ ತೃಪ್ತಿಗೊಂಡು ಹಾಡಿದ್ದ ಹಾಡು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 91


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರಿಗೆ ಹಾರ್ಮೋನಿಯಂ ಎಂದರೆ ಬಹಳ ಇಷ್ಟ. ಕಲಾವಿದರ ಸಂಘದ ನಾಟಕಗಳು ಮುಗಿದ ಮೇಲೆ ಆ ಹಾರ್ಮೋನಿಯಂ ತೆಗೆದುಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡರು. ಮನೆಯಲ್ಲಿ ಬಿಡುವಾದಗಲೆಲ್ಲ ಅದನ್ನು ಬಾರಿಸುತ್ತಿದ್ದರು. ದೈವಾದೀನರಾಗುವ ದಿವಸ. ಹನ್ನೊಂದು ಗಂಟೆಗೆ ಕೆಲಸ ಮಾಡುವ ಹುಡುಗರನ್ನೆಲ್ಲ ಕರೆಸಿ, ನಾನು ಹಾಡುಗಳನ್ನು ಹಾಡುತ್ತೇನೆ ಕೇಳಿ ಎಂದು, ನಾಟಕಗಳ ಹಾಡನ್ನು ಒಂದು ಗಂಟೆ ಹಾಡಿ, ಹಾರ್ಮೋನಿಯಂ ಬಾರಿಸಿದ್ದರು.


12 ಗಂಟೆವರೆಗೂ ಬಾರಿಸಿ, ಊಟ ಮಾಡಿ ಬಂದು ಮಲಗುವ ವೇಳೆ ಅವರು ತೀರಿಕೊಂಡದ್ದು. ಅವರ ನಿಧನ ಅತ್ಯಂತ ದುಃಖಕರವಾದ ಸಂಗತಿ. ಅವರು ಹೋದ ಕ್ಷಣ ಕರ್ನಾಟಕವೇ ಬಡವಾಗಿತ್ತು.
ಮುಂದುವರೆಯುವುದು...

36 views