
ಅಣ್ಣಾವ್ರು ಆ ಗುಡಿಸಲಲ್ಲಿ ಮಾರುತ್ತಿದ್ದ ಟೀ ಬೋಂಡಕ್ಕಾಗಿ ಕಾಯ್ತಾ ಇದ್ರಂತೆ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 114
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಗಗನಚುಕ್ಕಿ, ಬರಚುಕ್ಕಿಗೆ ಶೂಟಿಂಗ್ಗೆ ಹೋಗಿದ್ವಿ. ಅಲ್ಲಿ ರಸ್ತೆಯಲ್ಲಿ ಚಿಕ್ಕ ಗುಡಿಸಲಲ್ಲಿ ಅಜ್ಜಿಯೊಬ್ಬರು ಬೋಂಡ, ವಡೆ ಮತ್ತು ಟೀ ಮಾಡಿ ಕೊಡುತ್ತಿದ್ದರು. ಅಲ್ಲಿ ಲಾರಿ ಡ್ರೈವರ್ ಟೀ ಕುಡಿದು ಹೋಗುತ್ತಿದ್ರು. ರಾಜ್ಕುಮಾರ್ ಅವರಿಗೆ ಶೂಟಿಂಗ್ ಹೋದಾಗಲೆಲ್ಲ ಅಲ್ಲಿಗೆ ಹೋಗಬೇಕು. ಒಂದು ವಡೆ, ಬೊಂಡಾ ತಿಂದು, ಒಂದು ಲೋಟ ಟೀ ಕುಡಿದರೇನೇ ಇವರಿಗೆ ತೃಪ್ತಿ. ಭಗವಾನ್ ಅವರಿಗೊಂದು 100 ಕೊಡಿ ಅನ್ನುತ್ತಿದ್ದರು. ನಾನು ದುಡ್ಡು ಕೊಡುತ್ತಿದ್ದೆ.
ಸಣ್ಣ, ಸಣ್ಣ ವಿಷಯಗಳಲ್ಲಿ ತೃಪ್ತಿ ಕಾಣುತ್ತಿದ್ದರವರು. ಆ ಗುಣ ಎಲ್ಲರಲ್ಲಿಯೂ ಇರುವುದಿಲ್ಲ.
ಮುಂದುವರೆಯುವುದು...