ಅಣ್ಣಾವ್ರು ಇವರ ಕಾಲ್‌ ಶೀಟ್‌ ಕೇಳಿಯೇ ಶೂಟಿಂಗ್‌ ಶುರು ಮಾಡಿಸ್ತಿದ್ರಂತೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 69


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿಒಮ್ಮೆ ಧಾರವಾಡದಲ್ಲಿ ನಾಟಕದ ಕ್ಯಾಂಪ್‌ ಹಾಕಿದೆವು. ಅಲ್ಲಿ ಆಕಾಶವಾಣಿಯ ಪ್ರೋಗಾಂ ಅಸಿಸ್ಟೆಂಟ್‌ ಆಗಿದ್ದ ವಾಮನ್‌ರಾವ್ ಅವರು, ‘ಎಚ್ಚೆಮ್ಮ ನಾಯಕ' ನಾಟಕವನ್ನು ನೀವೆಲ್ಲ ಸೇರಿ ಮಾಡಿ, ನಾನು ಪ್ರಸಾರ ಮಾಡಿಸುತ್ತೇನೆ ಎಂದಿದ್ರು. ಹನ್ನೊಂದು ಗಂಟೆಗೆ ಎಲ್ಲ ಹೋಗಿದ್ದೆವು. ನರಸಿಂಹರಾಜು ಅವರು ಬಂದಿರಲಿಲ್ಲ. ರಾಜ್‌ಕುಮಾರ್‌ ಅವರು ನರಸಿಂಹರಾಜು ಅವರು ಬರುವವರೆಗೂ ನಾಟಕ ಶುರು ಮಾಡುವುದು ಬೇಡ ಅಂದ್ರು. ನೀವು ನಾಟಕ ಮಾಡಿತ್ತಲಿರಿ. ಅವರು ಬಂದ ಮೇಲೆ ಸೇರಿಸಿಕೊಳ್ಳೋಣ ಎಂದು ವಾಮನ್ ರಾವ್ ಹೇಳಿದ್ರು. ರಾಜ್‌ಕುಮಾರ್‌ ಒಪ್ಪಲೇ ಇಲ್ಲ. ನರಸಿಂಹರಾಜು ಅವರಿಗೆ ಅಷ್ಟು ಗೌರವ ಕೊಡುತ್ತಿದೆವು. ಅವರು ಅಷ್ಟೊಂದು ನಮಗೆ ಬೇಕಾದವರಾಗಿದ್ರು. ನಮ್ಮದೊಂದು ಗುಂಪು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ನರಸಿಂಹರಾಜು ಅವರನ್ನು ಕಂಡರೆ ನಮಗೆಲ್ಲ ತುಂಬಾ ಇಷ್ಟ ನರಸಿಂಹರಾಜು ಅವರ ಕಾಲ್‌ಶೀಟ್‌ ಇದಿಯಾ ಕೇಳಿ, ಅವರ ಕಾಲ್‌ಶೀಟ್‌ಗೆ ನಮ್ಮ ಕಾಲ್‌ಶೀಟ್‌ ಹೊಂದಿಕೆ ಮಾಡಿಕೊಳ್ಳೋಣ ಎಂದು ರಾಜ್‌ಕುಮಾರ್‌ ಹೇಳುತ್ತಿದ್ರು. 66ನೇ ಇಸವಿಯಿಂದಲೂ ಅವರು ನಮ್ಮ ಜೊತೆಗಿದ್ರು.ಮುಂದುವರೆಯುವುದು...

29 views