ಅಣ್ಣಾವ್ರು ಏಕವಚನ ಬಳಸಿ ಮಾತನಾಡಿಸುತ್ತಿದ್ದ ವ್ಯಕ್ತಿಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 74


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಅಶ್ವತ್ಥ್‌ ಮತ್ತು ನಾನು ಏಕವಚನದಲ್ಲಿಯೇ ಮಾತನಾಡುತ್ತಿದ್ದೆವು. ಅಷ್ಟು ಪ್ರೀತಿ ಇತ್ತು ನಮ್ಮಿಬ್ಬರ ನಡುವೆ. ಏಕವಚನ ಬಂದಾಗ ಐಕ್ಯತೆ ಇರುತ್ತದೆ. ಆತ್ಮೀಯತೆ ಹುಟ್ಟಿಕೊಳ್ಳುತ್ತದೆ.


ರಾಜ್‌ಕುಮಾರ್‌ ಅಭ್ಯಾಸ ಬಲದಿಂದ ಬಹುಜನರ ಬಳಿ ಬಹುವಚನದಿಂದ ಮಾತನಾಡುತ್ತಿದ್ದರು. ಕೆಲವರ ಬಳಿ ಏಕವಚನದಲ್ಲಿ ಮಾತನಾಡುತ್ತಿದ್ರು. ಅಯ್ಯರ್‌, ನರಸಿಂಹರಾಜು, ಬಾಲಣ್ಣ, ಜಿ.ಕೆ. ವೆಂಕಟೇಶ್‌ ಅವರೆಲ್ಲ ಏಕವಚನದಲ್ಲಿಯೇ ಮಾತನಾಡಿಸುತ್ತಿದ್ರು. ರಾಮ್‌ದಾಸ್‌ ಎಂಬುವರು ರಾಜ್‌ಕುಮಾರ್‌ ಅವರಿಗೆ ಹಾರ್ಮೊನಿಯಂ ಕಲಿಸಿದ ಗುರು. ಅವರನ್ನು ರೆಕಾರ್ಡಿಂಗ್‌ಗೆ ಕರೆಸಿ, ಕೂರಿಸುತ್ತಿದ್ರು. ಆಸ್ಥಾನದ ಕಲಾವಿದರಂತೆ, ಅವರನ್ನು ಕರೆದುಕೊಂಡು ಬಂದು ಕೂರಿಸಿ, ಅವರಿಗೆ ಹಾರ್ಮೊನಿಯಂ ಕೊಟ್ಟು, ಇವರಿಗೂ ಸ್ವಲ್ಪ ಕೆಲಸ ಕೊಡಿ ಅನ್ನುತ್ತಿದ್ರು. ಹೀಗೆ ಅನೇಕರಿಗೆ ರಾಜ್‌ಕುಮಾರ್‌ ಸಹಾಯ ಮಾಡುತ್ತಿದ್ರು.ಮುಂದುವರೆಯುವುದು...

18 views