ಅಣ್ಣಾವ್ರಿಗಿದ್ದ ರಂಗಭೂಮಿಯ ಆಸೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 91


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಹಾಡುಗಳ ಯಶಸ್ಸು ಸಂಗೀತ ನಿರ್ದೇಶಕರ ಮೇಲೆಯೇ ಅವಲಂಬಿತವಾಗಿರುತ್ತದೆ. ರಾಜ್‌ಕುಮಾರ್‌ ಅವರ ಎಲ್ಲ ಹಾಡುಗಳ ಯಶಸ್ಸಿಗೂ ಸಂಗೀತ ನಿರ್ದೇಶಕರೇ ಕಾರಣ. ಸನ್ನಿವೇಶಕ್ಕೆ ತಕ್ಕಂತೆ ಹಾಡಿದ್ದರೆ ಅದು ಸಹಜವಾಗಿಯೇ ಜನಪ್ರಿಯವಾಗುತ್ತದೆ. ಹಾಡಿನಲ್ಲಿ ಮಾಧುರ್ಯ ಇರಬೇಕು. ರಾಜ್‌ಕುಮಾರ್‌ ಅವರು ಅದಕ್ಕೆ ಪ್ರಾಮುಖ್ಯ ನೀಡುತ್ತಿದ್ದರು. ರಾಗಗಳ ಆಧಾರದ ಮೇಲೆ ಸಂಗೀತವನ್ನು ಮಾಡಿ ಎನ್ನುತ್ತಿದ್ದರು.


ರಂಗಭೂಮಿಯ ಹಾಡುಗಳನ್ನು ಡಿವಿಡಿ ಮಾಡಬೇಕು ಎಂಬ ಆಸೆ ಅವರಿಗಿತ್ತು. ಅದಕ್ಕೆ ನಾನು ಪ್ರಯತ್ನವನ್ನು ಪಟ್ಟಿದ್ದೆ. ನೀವು ಹಾಡಿದ ಹಾಡು ಹಾಡಬೇಡಿ. ನಿಮ್ಮ ತಂದೆ ಹಾಡಿದ ಹಾಡು ಹಾಡಿ ಎಂದು ನಾನು ಕೊಟ್ಟ ಸಲಹೆ ಅವರಿಗೆ ಮೆಚ್ಚುಗೆಯೂ ಅಗಿತ್ತು. ಪರಮಶಿವಯ್ಯ ಅವರನ್ನು ಕರೆಸಿ, ತಯಾರಿ ಮಾಡಿಕೊಂಡಿದ್ವಿ. ಆದರೆ ಅವರ ಆಸೆ ಈಡೇರಲಿಲ್ಲ.ಮುಂದುವರೆಯುವುದು...

17 views