ಅಣ್ಣಾವ್ರಿಗೆ ಮುದ್ದೆ ಕಾಲುಸೂಪು ತಿನ್ನೋಕೆ ಈ ಹೋಟೆಲ್ಲೆ ಆಗ್ಬೇಕು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 115


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಮೈಸೂರಿಗೆ ಹೋಗಬೇಕಾದರೆ ಎಷ್ಟೆಷ್ಟೋ ದೊಡ್ಡ ಹೋಟೆಲ್‌ ಇದೆ. ಇಲ್ಲಿಂದ ಮೈಸೂರಿಗೆ ಹೋಗಬೇಕಾದರೆ ಪಾಂಡವಪುರದ ಬಳಿ ಭುವನೇಶ್ವರಿ ಎಂಬ ಚಿಕ್ಕ ಹೋಟೆಲ್‌ ಸಿಗುತ್ತದೆ. ಅಲ್ಲಿ ನೆಲದ ಮೇಲೆ ಕೂರಿಸಿ, ಮುದ್ದೆ ಸಾರು, ಕಾಲುಸೂಪ್‌ ಕೊಡುತ್ತಾರೆ. ಬಹಳ ಫೇಮಸ್‌ ಹೋಟೆಲ್‌ ಅದು. ಅವರಿಗೆ ಅಲ್ಲಿ ಹೋಗಲೇಬೇಕಿತ್ತು.


ನಾನು ಹೋಗುತ್ತಿರಲಿಲ್ಲ. ಬನ್ನಿ ಎಂದು ಅವರು ನನ್ನನ್ನು ಕರೆಯುತ್ತಲೂ ಇರಲಿಲ್ಲ. ಅಲ್ಲಿಯೇ ಎದುರುಗಡೆ ಬ್ರಾಹ್ಮಣರ ಹೋಟೆಲ್‌ ಇದೆ, ಅಲ್ಲಿಗೆ ನಾನು ಹೋಗುತ್ತಿದ್ದೆ. ಬಿಡದಿಯಲ್ಲಿ ಇಡ್ಲಿ, ಭುವನೇಶ್ವರಿಯ ಮುದ್ದೆ ಇಷ್ಟೇ ಅವರು ಕೇಳುತ್ತಿದುದ್ದು.ಮುಂದುವರೆಯುವುದು...

22 views