ಅಣ್ಣಾವ್ರ ಫೇವರೀಟ್‌ ಡಾನ್ಸ್‌ ಮಾಸ್ಟರ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 82


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರ ಡಾನ್ಸ್‌ನ ಇತಿಮಿತಿಗಳನ್ನು ಜಯರಾಂ ತಿಳಿದುಕೊಂಡಿದ್ದರು. ಕಷ್ಟದ ನೃತ್ಯದ ಶೈಲಿಯನ್ನು ಮಾಡಲು ರಾಜ್‌ಕುಮಾರ್‌ಗೆ ಕಷ್ಟವಾಗುತ್ತದೆ ಎಂಬ ಅರಿವು ಅವರಿಗಿತ್ತು. ನಟನೆಯಲ್ಲಿ ರಾಜ್‌ಕುಮಾರ್‌ಅವರಿಗೆ ಸಿಕ್ಕಾಪಟ್ಟೆ ಸಾಮರ್ಥ್ಯ ಇತ್ತು. ಆದರೆ, ಡಾನ್ಸ್‌ನಲ್ಲಿ ಅಷ್ಟೊಂದು ಇರಲಿಲ್ಲ. ಏನು ಹೇಳಿದ್ರು ಅವರು ಮಾಡುತ್ತಿದ್ರು. ಆದರೆ, ಅವರಿಗೆ ಕಷ್ಟಕೊಟ್ಟು ಮಾಡಿಸಬಾರದು ಎಂಬುದನ್ನು ಜಯರಾಂ ತಿಳಿದುಕೊಂಡಿದ್ದರು. ಜಯರಾಂ ಅವರನ್ನು ಕಂಡರೆ ರಾಜ್‌ಕುಮಾರ್‌ಅವರಿಗೆ ಬಹಳ ಪ್ರೀತಿ. ಹಾಗಾಗಿ, ಸಿನಿಮಾಗಳಲ್ಲಿ ಡಾನ್ಸ್‌ಮಾಸ್ಟರ್ ಆಗಿ ಜಯರಾಂ ಅವರನ್ನೇ ಹಾಕಿ, ಬೇರೆಯವರು ಬೇಡ ಎಂದು ಹೇಳುತ್ತಿದ್ರು.


ಡಾನ್ಸ್‌ನಿರ್ದೇಶಕರಲ್ಲಿ ಮೂಗೂರು ಸುಂದರ್‌ಅವರೆಂದರೆ ಬಹಳ ಗೌರವ. ಆದರೆ, ತಮಿಳು, ತೆಲುಗಿನಲ್ಲಿ ಬ್ಯುಸಿ ಆಗಿದ್ದರಿಂದ ಕನ್ನಡಕ್ಕೆ ಹೆಚ್ಚಾಗಿ ಬರಲಿಲ್ಲ. ಅವರ ಮಗನೇ ಪ್ರಭುದೇವ. ರಾಜ್‌ಕುಮಾರ್‌ಅವರ ತುಕರಾಂ ಸೇರಿ ಒಂದೆರಡು ಸಿನಿಮಾಗಳಿಗೆ ಮೂಗುರು ಸುಂದರ್‌ಅವರ ಡಾನ್ಸ್‌ನಿರ್ದೇಶನ ಇದೆ.

ಮುಂದುವರೆಯುವುದು...

12 views