ಅಣ್ಣಾವ್ರು ಮಾಡಿದ ದಾನ ಧರ್ಮಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 107


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ತಿಪಟೂರಿನಲ್ಲಿ ಮ್ಯೂಸಿಕಲ್‌ ನೈಟ್ಸ್‌ ಮಾಡಿದಾಗ ಜೋರು ಮಳೆ ಬಂದು ಆಯೋಜಕರಿಗೆ ಸಿಕ್ಕಾಪಟ್ಟೆ ನಷ್ಟ ಆಯ್ತು. ಆಗ ರಾಜ್‌ಕುಮಾರ್‌ ಇನ್ನೊಂದು ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಲ್ಲಿ ಇರಿಸಿ. ಆಗ ಮಳೆ ಇರುವುದಿಲ್ಲ. ನಾನು ಬಂದು ನಡೆಸಿಕೊಡುತ್ತೇನೆ. ನೀವು ಒಂದು ರೂಪಾಯಿಯೂ ನಮಗೆ ಕೊಡುವುದು ಬೇಡ. ನಮ್ಮ ಖರ್ಚಿನಲ್ಲಿಯೇ ಬರುತ್ತೇವೆ. ಆರ್ಕೆಸ್ಟ್ರಾಗಳಿಗೂ ನಾವೇ ಹಣ ಕೊಡುತ್ತೇವೆ ಎಂದು ಆಯೋಜಕರಿಗೆ ಹೇಳಿದರು.


ನಂತರ ಉಚಿತವಾಗಿಯೇ ಕಾರ್ಯಕ್ರಮ ಮಾಡಿಕೊಟ್ವಿ. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ರಾಜ್‌ಕುಮಾರ್‌ ಅವರ ದೊಡ್ಡ ಗುಣವಾಗಿತ್ತು. ಆದರೆ, ತಾವು ಮಾಡಿದ ಸಹಾಯವನ್ನು ಅವರು ಇನ್ನೊಬ್ಬರ ಬಳಿ ಹೇಳುತ್ತಿರಲಿಲ್ಲ. ಅವರು ಎಷ್ಟೋ ಸಂದರ್ಶನ ಕೊಟ್ಟಿದ್ದಾರೆ. ಆದರೆ, ಎಲ್ಲಿಯೂ ಅವರು ಇದನ್ನೆಲ್ಲ ಹೇಳಿಕೊಂಡಿಲ್ಲ. ಅವರು ಮಾಡಿರುವ ದಾನ, ಧರ್ಮಗಳು ಪಾರ್ವತಮ್ಮ ಅವರನ್ನು ಬಿಟ್ಟರೆ ನನಗೆ ಗೊತ್ತು ಅಷ್ಟೇ.


ಮುಂದುವರೆಯುವುದು...


20 views