ಅಣ್ಣಾವ್ರ ಸದಾಶಿವನಗರದ ಬಂಗಲೆಯ ವಾಸ್ತು ದೋಷ!

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 34


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)




ಸದಾಶಿವನಗರದ ಬಂಗಲೆಯ ವಾಸ್ತು ಸರಿ ಇಲ್ಲ ಎಂದು ಪಾರ್ವತಮ್ಮ ಹೇಳಿದ್ರು. ರಾಜ್‌ಕುಮಾರ್‌ ವಾಕಿಂಗ್‌ ಮಾಡುವ ವೇಳೆ ನಾನು ಅವರ ಜೊತೆಗೆ ಇದ್ದೆ. ಅವರು ಬಾಗಿಲ ಬಳಿ ನಿಂತುಕೊಂಡು ಯೋಚನೆ ಮಾಡುತ್ತಿದ್ರು. ಆಗ ನಾನು ‘ಮುತ್ತುರಾಜಣ್ಣ, ಏನು ಯೋಚನೆ ಮಾಡುತ್ತಿದ್ದೀರಾ’ ಎಂದು ಕೇಳಿದೆ. ಆಗ ಅವರು, ಈ ಮನೆ ವಾಸ್ತು ಚೆನ್ನಾಗಿಲ್ಲ ಎಂದು ಪಾರ್ವತಿ ಹೇಳಿತ್ತಿದ್ದು,ಸ ಮನೆಯನ್ನು ಒಡಿಸಬೇಕು ಎಂದು ಇದ್ದಾಳೆ. ಈ ಮನೆ ಏನು ಮಾಡುತ್ತೆ ಭಗವಾನ್‌, ಮನಸು ಮುಖ್ಯ ಅಲ್ವಾ ಅಂದರು. ಅವರ ಮಾತುಗಳೆಲ್ಲ ವೇದ ವಾಕ್ಯದ ರೀತಿ ಇರುತ್ತಿತ್ತು. ಆ ಮಾತು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಇವತ್ತಿಗೂ ನಿಂತಿದೆ. ಈ ಮನೆ ಚೆನ್ನಾಗಿಲ್ಲ ಒಡಿಯಬೇಕು ಎಂದು ನೀನು ಹೇಳುತ್ತೀಯಲ್ವಾ ಇದೇ ಮನೆಯಲ್ಲಿ ಎವಿಎಂ ಇದ್ರು. ಅವರಿಗೇನು ಕಮ್ಮಿ ಆಗಿತ್ತು. ಒಂದು ಸ್ಟುಡಿಯೊ ಇತ್ತು ಅವರಿಗೆ. ಆಮೇಲೆ ಎರಡನೆಯದನ್ನು ಮಾಡಿಕೊಂಡ್ರು ಎಂದು ಪಾರ್ವತಮ್ಮನವರಿಗೆ ಹೇಳಿದ್ರು. ತಮ್ಮ ಜೀವಮಾನವಧಿಯವರೆಗೂ ಆ ಮನೆಯನ್ನು ಒಡೆಯಲು ಅವರು ಬಿಡಲಿಲ್ಲ. ಆ ಮನೆಯನ್ನು ಒಡೆದು ಎರಡು ಮಾಡಿದ್ದು ಅವರ ಕಾಲಾವಧಿಯ ನಂತರವೇ.



ಅವರ ತತ್ವಗಳು ಅದ್ಭುತವಾಗಿತ್ತು. ಅವರು ನಟರಾಗದಿದ್ರೆ ಯಾವುದಾದರೊಂದು ಆಶ್ರಮದಲ್ಲಿ ಸ್ವಾಮಿಗಳಾಗುತ್ತಿದ್ರು ಅನಿಸುತ್ತದೆ. ‘ಜೀವನ ಚೈತ್ರ’ ಆದ ಮೇಲೆ ಅಧ್ಯಾತ್ಮದ ಕಡೆ ಅವರ ಮನಸ್ಸು ತಿರುಗಲು ಶುರುವಾಯ್ತು. ಬಹಳ ಅಪರೂಪವಾಗಿ ಅವರು ಸಿನಿಮಾ ಮಾಡುತ್ತಿದ್ರು.


ಮುಂದುವರೆಯುವುದು…

33 views