ಅನಂತ್ ನಾಗ್‌ ಜೊತೆ ಪಾತ್ರ ಮಾಡು ಅಂದಾಗ ನಡುಗಿಬಿಟ್ಟಿದ್ದೆ!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 109

(ಮಾಲ್ಗುಡಿ ಡೇಸ್‌ ಆಡಿಟರ್‌ ವೆಂಕಟೇಶ್ ನೆನಪುಗಳು)
ಒಂದ್ರಲ್ಲಂತೂ, ರೋಮನ್ ಇಮೇಜ್ ಅಥವಾ ಇಂಜಿನ್ ಟ್ರಬಲ್, ಅದ್ರಲ್ಲಿ ಅನಂತ್ ನಾಗ್ ಮುಂದೆ ಪ್ರಿನ್ಸಿಪಲ್ ರೋಲ್ ಇತ್ತು. ಆ ಆರ್ಟಿಸ್ಟ್ ಬರ್ಲಿಲ್ಲ ಅವತ್ತು. ಅವಾಗ ವೆಂಕಿ ಮುದುಕನ ರೋಲ್ ಮಾಡ್ಬೇಕು ಅಂತ ಕೂದ್ಲೆಲ್ಲಾ ಬೆಳ್ಳಗೆ ಮಾಡ್ಬಿಟ್ಟು, (ಇವಾಗ ಬೆಳ್ಳಗಿದೆ ಅವಾಗ ಬೆಳ್ಳಗೆ ಇರ್ಲಿಲ್ಲ) ಮೇಕಪ್ ಎಲ್ಲಾ ಮಾಡ್ಬಿಟ್ಟು ಕೂರ್ಸಿ ಅಂತ ಹೇಳಿದ್ರು. “ನಾನು ಮಾಡಲ್ಲಾಂತ” ಹೇಳ್ದೆ. ಶಂಕರ್ ನಾಗ್ ಕೇಳಿದ್ರು “ಯಾಕೋ ಮಾಡಲ್ಲ?” ಅಂತ. ನಾನು ಹೇಳ್ದೆ “ಅನಂತ್ ನಾಗ್ ಮುಂದೆ ಆಕ್ಟ್ ಮಾಡು ಅಂತಿದ್ದಾರೆ, ಅವ್ರು ಲೆಜೆಂಡ್ ಅವ್ರು, ಅವ್ರ ಮುಂದೆ ಹೋಗಿ ನಾವು ಒಂದು ಸೀನ್ ಗೆ ಬೆಬೆಬೆ ಅಂತ ಹೇಳಿ, ಅವ್ರಿಗೆ ಏನಾದ್ರೂ ಕೋಪ ಬಂದು ಬೈದ್ರೆ” ಅಂತ. “ ಇಲ್ಲ ಅವ್ರು ಬೈಯಲ್ಲ, ನಿನಗ್ಯಾಕೆ, ನೀ ಮಾಡು”ಅಂತಹೇಳಿದ್ರು. ಅದೇನು ಧೈರ್ಯ ಗೊತ್ತಿಲ್ಲ ಒಂದೇ ಟೇಕಲ್ಲಿ ಆ ಶಾಟ್ ಓಕೆ ಆಗೋಯ್ತು.


ಒಂದ್ರಲ್ಲಿ ಮಾತ್ರ ಸ್ವಲ್ಪ ಜಾಸ್ತಿ ರೋಲ್ ಕೊಟ್ರು. ‘ಟ್ರಯಲ್ ಆಫ್ ಗ್ರೀನ್ ಬ್ಲೇಸರ್’ ಅದ್ರಲ್ಲಿ ಸಂಕೇತ್ಕಾಶಿ ಕಳ್ಳನ ಕ್ಯಾರೆಕ್ಟರ್, ನಾನು ಸೇಟು, ಒಂದು ಕೋಟ್ ಹಾಕೊಂಡು ಓಡಾಡ್ತಾ ಇರ್ತೀನಿ ಜಾತ್ರೆಯಲ್ಲಿ. ಇಲ್ಲೇ ‘ಪಾಪೂಸ್ ಕಾಟೇಜಲ್ಲಿ ಶೂಟ್ ಮಾಡಿದ್ದು ಜಾನ್ ದೇವರಾಜ್ ಇದ್ದಾರಲ್ಲ ಅಲ್ಲಿ. ಸಂತೆಯ ಅಟ್ಮಾಸ್ಫಿಯರ್ ಎಲ್ಲಾ ಕ್ರಿಯೇಟ್ ಮಾಡ್ಕೊಂಡು ಮಾಡಿದ್ವಿ. ನಾನು ಓಡಾಡ್ತಿದ್ರೆ ನನ್ನ ಜೇಬಿಂದ ಪರ್ಸ್ ಕದಿತಾನೆ. ಆ ಎಪಿಸೋಡ್ ತುಂಬಾ ಚೆನ್ನಾಗಿದೆ, ಕದಿಯೊದು ಕದ್ದು ಬಿಟ್ಟು, ಅದೇನೋ ಕಾರಣಕ್ಕೆ ವಾಪಾಸ್ ಇಡಕ್ಕೆ ಬರ್ತಾನೆ. ವಾಪಾಸ್ ಇಡಕ್ಕೆ ಬಂದಾಗ ಸಿಕ್ಹಾಕ್ಕೋಬಿಡ್ತಾನೆ. ಅವ್ನ ಹಿಡ್ಕೊಂಡು ಕಳ್ಳ ಅಂತ ಹೇಳಿ, ಎಲ್ರೂ ಅವ್ನಿಗೆ ಹೊಡ್ದು ಪೋಲೀಸ್ ಗೆ ಕೊಡ್ತೀವಿ. ಬಹಳ ಇಂಟ್ರಸ್ಟಿಂಗಾಗಿದೆ. ಸೋ ದಿಸ್ ಈಸ್ ಮೈ ಎಕ್ಸಪೀರಿಯನ್ಸ್ ವಿತ್ ಶಂಕರ್ ನಾಗ್.ಮುಂದುವರೆಯುವುದು…

35 views