ಅನಾಥಾಶ್ರಮದ ಅಜ್ಜಿಯ ಟ್ಯಾಲೆಂಟ್‌ ನೋಡಿ ನನಗೆ ಶಾಕ್‌ ಆಗಿತ್ತು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 44ಒಂದು ದಿವಸ ನಾನು ಕಾರಿನಲ್ಲಿ ಹೋಗುತ್ತಿದ್ದೆ. ಯಾರೋ ಫೋನ್ ಮಾಡಿ ಸ್ವಲ್ಪ ಕಾರು ನಿಲ್ಲಿಸು ಡ್ರೈವ್‌ ಮಾಡುತ್ತೀದ್ದೀಯಾ ಎಂದ್ರು. ಯಾರು ಎಂದು ಗೊತ್ತಿರಲಿಲ್ಲ ಆದ್ರೆ ನಿಲ್ಲಿಸಿದೆ. ಪ್ರತಿ ಭಾನುವಾರ 10.30ಕ್ಕೆ ಈ ಟಿವಿ ಯಲ್ಲಿ ನನ್ನ ಶೋ ಬರುತ್ತಿತ್ತು. ಅವರು 11.30ಕ್ಕೆ ನನಗೆ ಫೋನ್‌ ಮಾಡಿ, ಇವತ್ತು ನಿನ್ನ ಶೋನಲ್ಲಿ ಏನು ಬಂತು ಗೊತ್ತಾ ಎಂದ್ರು. ಲೇಡಿ ಧ್ವನಿ ಅದು. ಗೊತ್ತಿಲ್ಲ. ನಾಲ್ಕೈದು ಶೋ ಎಪಿಸೋಡ್‌ ಮಾಡಿದ್ದೇನೆ ಅಮ್ಮ ಎಂದೆ. ನಾನು ಯಾರು ಎನ್ನುವುದು ನಿನಗೆ ಬೇಡ. ಆದರೆ, ನೀನು ಹೇಳಿದ್ದನ್ನೆಲ್ಲ ಹೇಳ್ಲಾ ನಿನಗೆ ಅಂದ್ರು. ನಂತರ ಡೈಲಾಗ್ ಶುರು ಮಾಡಿಕೊಂಡ್ರು. ‘ನಾನು ಕೆಲಸದಲ್ಲಿದ್ದಾಗ ಮಗುವಾಯ್ತು. ಆಗ, ಕೆಲಸ ಬಿಟ್ಟು ಮಗುವನ್ನು ನೋಡಿಕೊಂಡೆ. ಈಗ ನಾನು ವೃದ್ಧಾಶ್ರಮದಲ್ಲಿದ್ದೇನೆ. ನನ್ನ ಮಗ, ಸೊಸೆ ಬಹಳ ಒಳ್ಳೆಯವರು. ಆದರೆ ಅವರಿಗೆ ನೋಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಇಲ್ಲಿ ಬಿಟ್ಟಿದ್ದಾರೆ. ನಾನು ಇಲ್ಲಿ ತುಂಬಾ ಚೆನ್ನಾಗಿದ್ದೇನೆ. ಅದೇ ನಾನು ಕೆಲಸ ಬಿಡದೇ ಮಗನನ್ನು ಅನಾಥಾಶ್ರಮಕ್ಕೆ ಹಾಕಿದ್ರೆ, ನಾನು ಈಗ ಚೆನ್ನಾಗಿರುತ್ತಿದ್ದೆ. ವೃದ್ಧಾಶ್ರಮಕ್ಕೆ ಬರುತ್ತಿರಲಿಲ್ಲ’ ಎಂದ್ರು.

ಅದನ್ನು ಹೇಳಿದ ಅವರು, ನೀನು ತಲೆ ಕೆಡಿಸಿಕೊಳ್ಳಬೇಡ. ಡೈಲಾಗ್‌ ಚೆನ್ನಾಗಿದೆ. ಎಲ್ಲರ ನೋವು ನಿನಗೆ ಅರ್ಥವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿ ಫೋನ್‌ ಇಟ್ರು. ನಾನು ಎಲ್ಲಿಂದ ಫೋನ್‌ ಬಂದಿದ್ದು ಎಂದು ಹುಡುಕಿದೆ. ಅದು ವೃದ್ಧಾಶ್ರಮದಿಂದ ಬಂದ ಕರೆಯಾಗಿತ್ತು. ಈಟಿವಿ ಕಚೇರಿಗೆ ಫೋನ್‌ ಮಾಡಿ ನನ್ನ ಫೋನ್‌ ನಂಬರ್‌ ತೆಗೆದುಕೊಂಡಿದ್ರು. ಅವರು ಉಪಯೋಗಕ್ಕೆ ಇಲ್ಲ ಎಂಬಂತೆ ಅನಾಥಾಶ್ರಮಕ್ಕೆ ಬಿಡುತ್ತಾರೆ. ಆದರೆ, ಅವರಲ್ಲಿ ಸಾಕಷ್ಟು ಪ್ರತಿಭೆಗಳಿರುತ್ತವೆ.ಮುಂದುವರೆಯುವುದು...

7 views