ಅಭಿಮಾನಿಗಳ ಎಲ್ಲ‌ ಪತ್ರಕ್ಕೂ ಶಂಕರ್‌ ನಾಗ್ ಉತ್ತರಿಸುತ್ತಿದ್ದ ರೀತಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 17

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)
ಪರಮ್: ಮಾಲ್ಗುಡಿಗೆ ಹೇಗೆ ಹೊಂದ್ಕೊಂಡ್ರಿ? ಅಥವಾ ಆ ಪ್ರಾಜೆಕ್ಟ್ ಶಂಕರ್ ಗೆ ಸಿಕ್ಕಿದ್ದು ಹೇಗೆ? ಅಥವಾ ಹೇಗೆ ನಿಮ್ಮ ಟೇಬಲ್ ಗೆ ಬಂತು?


ರನೇಶ್ ಭಟ್; ಶಂಕರ್ ಏನೇ ಮಾಡಿದ್ರೂ ಅದಕ್ಕೆ ಒಂದು ಕ್ಲಾಸ್ ಟಚ್ ಇರೋದು. ಈಗ ಅವರಿಗೆ ಒಂದು ಲೆಟರ್ ಬರುತ್ತೆ, ಅಭಿಮಾನಿಯಿಂದ. ಅದಕ್ಕೆ ಉತ್ತರ ಬರೆಯ ಬೇಕಂದ್ರೆ, ಲೆಟರ್ ತಗೊಂಡು, ಕೂತು, ಉತ್ತರ ಬರೆಯುವ ಅಭ್ಯಾಸ ಅವ್ರಿಗೆ ಇರ್ಲಿಲ್ಲ. ಆ ಲೆಟರಲ್ಲೇ ಎಲ್ಲೆಲ್ಲಿ ಜಾಗ ಇದ್ಯೋ ಅಲ್ಲೇ ಅದಕ್ಕೆ ಉತ್ತರ ಬರೆದು ಬಿಡೋದು. ಫ್ರಮ್ ಅಡ್ರಸ್ ಒಡೆದ್ಹಾಕಿ, ಟು ಅಡ್ರಸ್ ಬರೆದು ಬಿಡೋದು. ಸ್ಟಾಂಪ್ ಇಲ್ಲದೇನೆ ಬಾಕ್ಸಿಗೆ ಹಾಕ್ಬಿಡೋದು. “ಸ್ಟಾಂಪ್ ಇಲ್ದಿದ್ರೆ ಹೋಗಲ್ಲ”ಅಂತಂದ್ರೆ, “ಹೋಗುತ್ತೆ ಕಣೋ, ಎರಡು ರೂಪಾಯಿ ಅವ್ರ ಹತ್ರ ಇಸ್ಕೊತಾರೆ. ಕಾಗದ ಹೋಯ್ತಲ್ವ ತಕ್ಷಣ” ಅಂತ. ಇಲ್ದಿದ್ರೆ ಅದಕ್ಕೆ ಒಂದು ಟೈಮ್ ಎಲ್ಲ, ಇರ್ತಿರ್ಲಿಲ್ಲ ಅವ್ರ ಹತ್ರ.


ಅವ್ರಿಗೆ ಟೈಮೇ ಇರ್ತಿರ್ಲಿಲ್ಲ, ಟೈಮೇ ಸಾಕಾಗ್ಲಿಲ್ಲ ಅವ್ರಿಗೆ. ದಿನದಲ್ಲಿ ಇಪ್ಪತ್ತನಾಲ್ಕು ಗಂಟೆ ಸಾಲ್ತಿರ್ಲಿಲ್ಲ ಅವ್ರಿಗೆ. ನಲವತ್ತೆಂಟು ಗಂಟೆ ಮಾಡ್ಬೇಕಿತ್ತು ಭಗವಂತ. ಆತ ನಿದ್ದೆ ಮಾಡುತ್ತಿದ್ದದ್ದೇ ಥ್ರೀ ಹವರ್ಸ್, ಮ್ಯಾಕ್ಸಿಮಮ್ ಫೋರ್ ಹವರ್ಸ್. ಕೆಲ್ಸ ಅಂದ್ರೆ ಶಂಕರ್, ಯಾವತ್ತೂ ದಣಿವು ಆಗ್ತನೇ ಇರ್ಲಿಲ್ಲ.ಮುಂದುವರೆಯುವುದು…

10 views