ಅಮ್ಮನ ಕೈರುಚಿ ಬೆಲೆ ಗೊತ್ತಾಗೋದು ಯಾವಾಗ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 67ನಿಮ್ಮ ಯೋಗ್ಯತೆ ಅಪ್ಪ, ಅಮ್ಮನ ಬಳಿ ಇದ್ರೆ ಮಾತ್ರ ಸಿಗುತ್ತದೆ. ಆಚೆ ಬಂದು, ಹಾಸ್ಟೆಲ್‌ಗೆ ಹೋದಾಗಲೇ ನಿಜ ಜೀವನದ ಅರಿವಾಗುವುದು. ಅಮ್ಮ ಅಡುಗೆ ಮಾಡಿದ್ರೆ ನೂರೆಂಟು ಕೊಂಕು ಹೇಳ್ತೇವೆ. ಅದೇ ಹಾಸ್ಟೆಲ್‌ನಲ್ಲಿ ಇದ್ದಾಗ, ಮಧ್ಯಾಹ್ನ ಆಗುತ್ತಿದ್ದಂತೆ ಅಮ್ಮ ಮಾಡಿದ ಸಾರಿನ ವಾಸನೆ ಮೂಗಿಗೆ ಬಡಿಯುತ್ತದೆ. ಕಳೆದುಕೊಂಡಾಗಲೇ ಎಲ್ಲದರ ಬೆಲೆ ಗೊತ್ತಾಗುವುದು. ಆರು ತಿಂಗಳು ಅಪ್ಪ, ಅಮ್ಮನ ನೋಡಿದಿದ್ದಾಗಲೇ ಅವರ ಫೋಟೊ ಸಿಕ್ಕರೂ ಅಳು ಬರುತ್ತದೆ.


ಕೊಪ್ಪಳದಲ್ಲಿ ಕಳೆದ ದಿನಗಳು ನನಗೆ ಸಾಕಷ್ಟು ಅನುಭವ ಕಲಿಸಿದೆ. ಇಷ್ಟು ದಿವಸ ಸಿಕ್ಕ ಮರ್ಯಾದೆ ನನ್ನದಲ್ಲ. ಇಷ್ಟು ದಿನ ಸಿಕ್ಕ ಯಾವ ಸವಲತ್ತುಗಳು ನನ್ನದಲ್ಲ. ಇದು ನನ್ನ ಅಪ್ಪ, ಅಮ್ಮನ ಸವಲತ್ತು. ನನ್ನ ಸವಲತ್ತುಗಳನ್ನು ನಾನೇ ಹುಡುಕಬೇಕು ಎಂಬುದು ನನಗೆ ಆಗ ಅರಿವಾಯ್ತು.ಮುಂದುವರೆಯುವುದು...

26 views