ಅಮೇರಿಕದಲ್ಲಿ ಭಾರತದ ಧ್ವಜ ಕಂಡಾಗ.....

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 21
ಹೊರನಾಡ ಕನ್ನಡಿಗರು ನಮಗೆ ಬಳ ಪ್ರೀತಿ ತೋರಿಸುತ್ತಾರೆ. ಅವರ ಮನೆಯವರೇ ಬಂದಾಗ ಅವರಿಗೆ ಅಷ್ಟೊಂದು ಸಮಯ ಇಲ್ಲದೇ ಇರಬಹುದು. ಆದರೆ, ಕಲಾವಿದರು ಹೋದಾಗ ಸಿಕ್ಕಾಪಟ್ಟೆ ಪ್ರೀತಿ ತೋರಿಸುತ್ತಾರೆ. ನಾವು ಹೋಗುವಾಗ ಮನೆಯೆಲ್ಲ ಕ್ಲೀನ್‌ ಮಾಡಿ ನಮ್ಮನ್ನು ಸ್ವಾಗತಿಸುತ್ತಾರೆ. ಬರುವಾಗ ಉಡುಗೆಗಳನ್ನು ಕೊಡುತ್ತಾರೆ. ನಮಗೋಸ್ಕರ ರಜೆ ಹಾಕಿ ನಮ್ಮನ್ನು ಸುತ್ತಿಸುತ್ತಾರೆ. ಸ್ವಾಮಿಗಳನ್ನು ನೋಡಿಕೊಂಡ ರೀತಿಯಲ್ಲಿ ನೋಡುತ್ತಾರೆ. ಅವರ ಮಕ್ಕಳ ಬಳಿ, ಆಂಕಲ್‌ ಕಾಲಿಗೆ ನಮಸ್ಕಾರ ಮಾಡು, ಅವರ ಬುದ್ಧಿ ನಿನಗೆ ಬರ್ಲಿ. ಅವರ ತರಹವೇ ನೀನು ಕಲಾವಿದ ಆಗಬೇಕು ಎಂದು ಬುದ್ಧಿ ಹೇಳ್ತಾರೆ.


ಮಕ್ಕಳಿಗೆ ನೃತ್ಯ, ಸಂಧ್ಯಾವಂದನೆ, ಸಂಸ್ಕೃತದ ಪಾಠ ಮಾಡುತ್ತಾರೆ. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಅದನ್ನು ಉಳಿಸಬೇಕು ಎಂಬ ಹಂಬಲ ಅವರದು. ದೂರ ಇರುವುದರಿಂದ ನಾಡಿನ ಬೆಲೆ ಅವರಿಗೆ ತಿಳಿದಿದೆ. ನಾವು ಮೂರು ತಿಂಗಳು ಅಮೆರಿಕದಲ್ಲಿ ಇದ್ದಾಗ ಭಾರತದ ಧ್ವಜವನ್ನು ಕಂಡಾಗ ಅಪ್ಪಿ ಅಳುವಂತೆ ಆಗುತ್ತಿತ್ತು. ಆ ಭಾವನೆಯನ್ನು ವಿವರಿಸಲು ಸಾಧ್ಯವಿಲ್ಲ.ಮುಂದುವರೆಯುವುದು...

23 views