ಅಲ್ಲಿ ಎಲ್ಲ ದೆವ್ವದ ತರಾನೇ ಕೆಲ್ಸ ಮಾಡಿರೋದು!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 121

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)
ಪರಮ್: ಮರೆಯಲಾಗದ ಘಟನೆ ಅಂತ ಯಾವದನ್ನಾದ್ರೂ ನೆನೆಸ್ಕೊಬೇಕು ಅಂದ್ರೆ, ಮಾಲ್ಗುಡಿ ಎಕ್ಸಪೀರಿಯನ್ಸಲ್ಲಿ ಯಾವುದನ್ನ ನೆನೆಸ್ಕೊತೀರ?


ನಾಗರಾಜ್: ಐಟಮ್ ತುಂಬಾ ಕಡಿಮೆ ಇರ್ತಿತ್ತು ಅಲ್ಲಿ ಅದನ್ನೆಲ್ಲಾ ಬ್ಯಾಲೆನ್ಸ್ ಮಾಡ್ಕೊಂಡು ಶೂಟ್ ಮಾಡ್ಬೇಕಾಗ್ತಿತ್ತು.


ಪರಮ್: ಆಗುಂಬೆಯಿಂದ ತುಂಬಾ ದೂರ ಅಂತ ಕೇಳ್ಪಟ್ಟಿದ್ದೀನಿ


ನಾಗರಾಜ್: ಹೌದು ರಿಬ್ಬನ್ ಪೇಟೆ ತುಂಬಾ ದೂರ ಇತ್ತು. ಆಮೇಲೆ ಜೇನು ಸುಮಾರು ಜನ ಆರ್ಟಿಸ್ಟ್ ಗಳ ಮೇಲೆ ಅಟ್ಯಾಕ್ ಮಾಡ್ಬಿಟ್ಟಿತ್ತು. ಅದು ಮರಿಯಕ್ಕೇ ಆಗಲ್ಲ. ಮೆಮೊರೆಬಲ್ ಎಕ್ಸಪೀರಿಯನ್ಸ್ ಒಂದೆರಡಲ್ಲ, ತುಂಬಾ ಇದೆ. ಸ್ಟಾಚ್ಯು ಮಾಡಿದ್ರು, ಮತ್ತೆ ಫೌಂಟೆನ್ ಮಾಡಿದ್ರು, ರಾಮನಗರದಿಂದ ಕಾರು ತಗೊಂಡು ಹೋಗಿದ್ರು. ಜಗದೀಶ್, ವೆಂಕಿ ಎಲ್ಲಾ ತುಂಬಾ ಚೆನ್ನಾಗಿ ಕೆಲ್ಸ ಮಾಡ್ತಿದ್ರು. ವೆಂಕಿ ಅಂದ್ರೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್. ನರಸಿಂಹನ್ ಅವ್ರ ಮಗ ಬದ್ರಿಯವರ ಸ್ನೇಹಿತ ವೆಂಕಿ. ಜಾನ್ ದೇವರಾಜ್ ತುಂಬಾ ಕೆಲ್ಸ ಮಾಡಿದ್ರು. ಸಯ್ಯದ್ ಅಂತ ಸೆಟ್ ಅಸಿಸ್ಟೆಂಟ್ ಇದ್ದ. ಅವ್ನು ದೆವ್ವನೇ ಅವ್ನು, ಗಿಡ ಬೇಕಂದ್ರೆ, ಗಿಡ ಕತ್ತರಿಸ್ಕೊಂಡು ತರ್ತಿದ್ದ. ಮನುಷ್ಯರ ತರ ಯಾರೂ ಕೆಲ್ಸ ಮಾಡಿಲ್ಲ, ದೆವ್ವದ ತರನೇ ಎಲ್ಲಾ ಕೆಲ್ಸ ಮಾಡಿರೋದು.ಮುಂದುವರೆಯುವುದು…

35 views