ಅವತ್ತು ಶಂಕರ್‌ನಾಗ್‌ ನನ್ನ ಹತ್ರ ಸಂಭಾವನೆ ಕೇಳಿದ್ದು ಯಾಕೆ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 51
ಕಂಠೀರವ ಸ್ಟುಡಿಯೊದಲ್ಲಿ ಶಂಕರ್‌ನಾಗ್‌ ತರಂಗ ಓದುತ್ತಿದ್ರು. ನನ್ನ ಬ್ರ್ಯಾಂಡ್‌ ಮಾಡಬೇಡಿ ಎಂಬ ಟೈಟಲ್‌ ಇತ್ತು. ಸಂತೋಷ್‌ಕುಮಾರ್‌ ಗುಲ್ವಾಡಿ ಅವರು ಬರೆದಿದ್ರು. ನಾನು ಅವರ ಹಿಂದೆ ಹೋಗಿ ನಿಂತೆ. ಆಗ ಅವರು, ನಿಮ್ದೆ ನೋಡುತ್ತಿದ್ದೇನೆ. ಇನ್ನು ಮೇಲೆ ನೀವು ನನಗೆ ಸಂಭಾವನೆ ಕೊಡಬೇಕು. ಯಾಕಂದ್ರೆ ನನ್ನ ಡೈಲಾಗ್‌ಗೆ ನಿಮಗೆ ಹೆಚ್ಚಿನ ಚಪ್ಪಾಳೆ ಬರುವುದು ಎಂದ್ರು. ಇದರಲ್ಲಿ ಬರೆದಿದ್ದಾರ ನನ್ನ ಬಗ್ಗೆ ಎಂದೆ. ಇದರಲ್ಲಿ ಅಲ್ಲಾರೀ, ಮೈಸೂರು ರೋಡ್‌ನಲ್ಲಿ ನಿಮ್ಮ ಶೋ ಇತ್ತಲ್ವಾ ನಿನ್ನೆ ಎಂದ್ರು. ಒಂದು ಗಂಟೆ ನನ್ನ ಶೋ ಅವರು ನೋಡಿದ್ರು. ಎಲ್ಲ ಡೈಲಾಗನ್ನು ಅವರು ಹೇಳಿದ್ರು. ಜನ ನಿಮ್ಮನ್ನು ಹೇಗೆ ಬಿಟ್ರು ಎಂದೆ. ಕಾರಿನಲ್ಲಿಯೇ ಕುಳಿತು ನೋಡ್ದೆ ಎಂದ್ರು.ಮುಂದುರೆಯುವುದು...

7 views