ಅ‌ಣ್ಣಾವ್ರ ಮ್ಯೂಸಿಕಲ್‌ ನೈಟ್ಸ್‌ ಎಂಬ ಪ್ರೋಗ್ರಾಂ ಒಂದು ಸೇವೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 102


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ನೆರೆ ರಾಜ್ಯದವರು ಪ್ರವಾಹದಿಂದಾಗಿ ಆತಂಕದಲ್ಲಿದ್ದಾಗ ರಾಜ್‌ಕುಮಾರ್‌ಅವರು ದೇಣಿಗೆ ಸಂಗ್ರಹಿಸಿ ಅರ್ಪಿಸಿದರು. ಬೀದಿಯಲ್ಲಿ ಜೋಳಿಗೆ ಹಿಡಿದುಕೊಂಡು ಅಂಗಡಿಗಳಿಂದ ಹಣ ಸಂಗ್ರಹಿಸಿ ದೇಣಿಗೆ ನೀಡಿದರು. ಸಂತ್ರಸ್ತರಿಗೂ ನೆರವಾಗುವುದರ ಜೊತೆಗೆ ಚಳವಳಿಗಳಲ್ಲೂ ಮುಂಚೂಣಿಯಲ್ಲಿದ್ದರು. ಅದು ರಾಜ್‌ಕುಮಾರ್‌ಅವರ ವ್ಯಕ್ತಿತ್ವ.


ನಮ್ಮ ಕನ್ನಡ ನಾಡಿಗೆ ರಾಜ್‌ಕುಮಾರ್‌ಅವರು ಏನು ಮಾಡಿದ್ದಾರೆ ಎಂಬ ಪ್ರಶ್ನೆ ಉದ್ಬವಾಗುವುದು ಸಹಜ. ಹಲವರು ಈ ಪ್ರಶ್ನೆಯನ್ನು ಕೇಳುತ್ತಾರೆ. ರಾಜ್‌ಕುಮಾರ್‌ಅವರು ‘ಮ್ಯೂಸಿಕಲ್‌ನೈಟ್ಸ್‌’ನಲ್ಲಿ ದುಡಿನ ಹಣವನ್ನು ಧರ್ಮ ಕಾರ್ಯಗಳಿಗೆ ವಿನಿಯೋಗ ಮಾಡಿದರೆ ಹೊರತು ಅದರಲ್ಲಿ ಒಂದು ಪೈಸೆಯನ್ನು ಸ್ವಂತ ಖರ್ಚಿಗೆ ಬಳಸಲಿಲ್ಲ. ಇದಕ್ಕೆ ನಾನೇ ಸಾಕ್ಷಿ. ಮೂರು ಗಂಟೆಗಳ ಕಾಲ ಹಾಡಿ, ಕುಣಿದು ಶ್ರಮ ವಹಿಸಿದರೂ, ಒಂದಾಣೆ ನನಗೆ ಬೇಕು ಎಂದು ಎಂದಿಗೂ ಕೇಳಲಿಲ್ಲ. ಅದರಿಂದ ಬಂದ ಹಣದಲ್ಲಿ ಎಷ್ಟೋ ಊರುಗಳಲ್ಲಿ ಕಲಾಮಂದಿರ, ಸ್ಟೇಡಿಯಂಗಳನ್ನು ನಿರ್ಮಿಸಲು ನೆರವಾಗಿದ್ದಾರೆ.


ಮುಂದುವರೆಯುವುದು...

16 views