ಆಗ ಧಾರಾವಾಯಿಯಲ್ಲಿ ದರ್ಶನ್‌ಗೆ ಕೊಡುತ್ತಿದ್ದ ಸಂಭಾವನೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 122


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
93–94 ಇಸವಿಯಲ್ಲಿ ಧಾರಾವಾಹಿಗಳನ್ನು ಮಾಡಿದೆ. ಆಗ ದೂರದರ್ಶನ ಬಿಟ್ಟರೆ, ಉದಯ ವಾಹಿನಿ ಒಂದೇ ಇದಿದ್ದು. ‘ಅತ್ತಿಗೆ’ ನನ್ನ ಮೊದಲ ಧಾರಾವಾಹಿ. ರಾಘವೇಂದ್ರ ರಾಜ್‌ಕುಮಾರ್‌ ಅದರಲ್ಲಿ ಹೀರೊ. ಗಣೇಶ್‌ ನನಗೆ ಸಹಾಯಕನಾಗಿದ್ದ. ‘ಊರ್ವಶಿ’ ಧಾರಾವಾಹಿಯಲ್ಲಿ ದರ್ಶನ್‌ ಹೀರೊ. ಅವರಿಗೆ ದಿನಕ್ಕೆ 1 ಸಾವಿರ ಸಂಭಾವನೆ ಇತ್ತು. ಇದಾದ ಮೇಲೆ ಶ್ರೀಮತಿ ಧಾರಾವಾಹಿ ಮಾಡಿದೆ. ದರ್ಶನ್‌ ಮತ್ತು ಗಣೇಶ್‌ ಇಬ್ಬರೂ ಹೀರೊ ಅದರಲ್ಲಿ. ದರ್ಶನ್‌ ಉಚ್ಚಾರಣೆಯನ್ನು ಬಹಳಷ್ಟು ತಿದ್ದಿದ್ದೇನೆ. ನಾನು ಹೇಳಿದ್ದನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದ. ತುಂಬಾ ಒಳ್ಳೆಯ ಹುಡುಗ ಅವನು. ಆಗಲಿಂದಲೂ ಅವನು ನನಗೆ ಅಚ್ಚುಮೆಚ್ಚು. ಹಾಗಾಗಿಯೇ ಅವನನ್ನು ಹೀರೊ ಮಾಡಿ ಮೇಲಿಂದ, ಮೇಲೆ ಧಾರಾವಾಹಿ ಮಾಡಿದ್ದೆ.ಮುಂದುವರೆಯುವುದು...

28 views