ಆಗಿನ ಕಾಲದ ಹಾಡಿನ ಚಿತ್ರೀಕರಣ ಹೇಗಿರುತ್ತಿತ್ತು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 83


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಅವರ ಜೊತೆಗೆ ಜಯರಾಂ ಹೊಂದಿಕೊಂಡು ಹೋಗುತ್ತಿದ್ರು. ಬೆಂಗಳೂರಿಗೆ ಬಂದರೆ ಮೋತಿ ಮಹಾಲ್‌ನಲ್ಲಿ ಅವರಿಗೆ ರೂಂ ಮೀಸಲಿರುತ್ತಿತ್ತು. ಶೂಟಿಂಗ್‌ ಇರುವ ಹಿಂದಿನ ದಿನವೇ ಅವರು ಹೋಂ ವರ್ಕ್‌ ಮಾಡುತ್ತಿದ್ರು. ಮರುದಿನ ನೇರವಾಗಿ ನಿರ್ದೇಶನಕ್ಕೆ ಇಳಿಯುತ್ತಿದ್ರು. ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಎಷ್ಟೋ ವೇಳೆ ಒಂದು ಹಾಡಿನ ದೃಶ್ಯವನ್ನು ಒಂದೇ ದಿವಸಕ್ಕೆ ಮುಗಿಸಿದ್ದೇವೆ. ‘ನೀ ಬಂದು ನಿಂತಾಗ’ ಹಾಡನ್ನು ಕೆಆರ್‌ಎಸ್‌ನಲ್ಲಿ ಬೆಳಿಗ್ಗೆ 9ಕ್ಕೆ ಶುರು ಮಾಡಿ, ಸಂಜೆ 5ಕ್ಕೆ ಪ್ಯಾಕ್‌ಅಪ್‌ ಮಾಡಿದ್ದೆವು. ಕಸ್ತೂರಿ ನಿವಾಸ ಶೂಟಿಂಗ್ ನಡೆದಿದ್ದೇ 19 ದಿವಸ. ಆಗಿನ ಕಾಲದಲ್ಲಿ 20–25–30 ದಿನಗಳಲ್ಲಿ ಶೂಟಿಂಗ್‌ ಮುಗಿಯುತ್ತಿತ್ತು. ಈಗಿನಂತೆ 100 ದಿವಸ ಶೂಟಿಂಗ್‌ಇರುತ್ತಿರಲಿಲ್ಲ. ಆಗ ಕಾಲ್‌ಶೀಟ್‌ಗೆ ಅಷ್ಟೊಂದು ಬೆಲೆ ಇರುತ್ತಿತ್ತು.

ನಮ್ಮ ತಂಡವೇ ಸೊಗಸಾಗಿತ್ತು. ಆತ್ಮೀಯತೆ, ಸೌಹಾರ್ದತೆ, ಸಹಭಾಗಿತ್ವದ ಜೊತೆಗೆ ಕಷ್ಟ, ಸುಖಗಳಲ್ಲಿ ಒಬ್ಬರಿಗೊಬ್ಬರು ನೆರವಾಗುವ ಗುಣ ಇತ್ತು. ಕೌಟುಂಬಿಕ ವಾತಾವರಣ ನಮ್ಮಲ್ಲಿ ಇತ್ತು.ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌ಪರಮೇಶ್ವರ

20 views