ಆಗುಂಬೆಗೆ ಬಂದ ತಾಜ್‌ ರೆಸಿಡೆನ್ಸಿ ಮತ್ತು ಕಲರಿ ಕಾಂಟಿನೆಂಟಲ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 24

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಸೆಲೆಕ್ಟ್ ಆದ್ಮೇಲೆ ಅದಕ್ಕೆ ಡೆಕೊರೇಶನ್ ಬೇಕಾಯ್ತು. ಏನೇನು ಡೆಕೊರೇಶನ್? ಅಂದ್ರೆ, ಆಗ ಬ್ರಿಟೀಷರ ಕಾಲದಲ್ಲಿ ಫೌಂಟೇನ್ ಇರೋದು. ಸರಿ ಒಂದು ಫೌಂಟೇನ್ ಕ್ರಿಯೇಟ್ ಮಾಡಿದ್ವಿ, ಒಂದು ಸರ್ಕಲಲ್ಲಿ. ಇನ್ನೊಂದು ಸರ್ಕಲಲ್ಲಿ ಒಬ್ಬ ಬ್ರಟೀಷ್ ಅಧಕಾರಿಯ ಫೈಬರ್ ನಲ್ಲಿ ಒಂದು ದೊಡ್ಡ ಸ್ಟಾಚ್ಯು ಮಾಡಿದ್ವಿ. ಅರ್ಧ ಕಳೆ ಬಂದ್ಬಿಡ್ತು. ಆಮೇಲೆ ಬೋರ್ಡ್ ಗಳು ಎಲ್ಲ ಹಳೆಗನ್ನಡದಲ್ಲಿ ಮಾಡಿದ್ವಿ. ಒಂದು ಮನೆನ ಪೋಸ್ಟ್ ಆಫೀಸ್ ಮಾಡಿದ್ವಿ. ಇನ್ಯಾವುದೋ ಮನೆನ ಪೊಲೀಸ್ ಸ್ಟೇಷನ್ ಮಾಡಿದ್ವಿ. ಹೀಗೆ ಒಂದು ಊರಲ್ಲಿ ಏನೇನು ಬೇಕೋ ಎಲ್ಲಾ ಕ್ರಿಯೇಟ್ ಮಾಡ್ಬಿಟ್ವಿ. ಪೋಲೀಸ್ ಸ್ಟೇಷನ್ ಮುಂದೆ ಹಳೆ ಎರಡು ಗಾಡಿ ನಿಲ್ಲಿಸಿ ಬಿಡೋದು. ಒಂದು ಮನೆಯಲ್ಲಿ ಕಿಟಕಿ ತರ ಮಾಡಿ ಪೋಸ್ಟ್ ಆಫೀಸ್ ಕ್ರಿಯೇಟ್ ಮಾಡಿದ್ವಿ. ಹಂಗೆ ಕ್ರಿಯೇಟ್ ಮಾಡ್ತಾ ತುಂಬಾನೆ ಪರ್ಫೆಕ್ಟ್ ಆಯ್ತು.


ಆ ಮೇಲೆ ಇಡೀ ಊರವ್ರು ನಮಗೆ ತುಂಬಾ ಸಹಕಾರ ಕೊಟ್ರು. ಯಾರೂ ಏನೇ ಕೇಳಿದ್ರೂ ಇಲ್ಲಾಂತ ಅಂತನೇ ಇರ್ಲಿಲ್ಲ. ಅದ್ರಲ್ಲಿ ಪ್ರಾಪರ್ಟಿಗಳು, ಬ್ರಾಸ್ ವೆಷಲ್ ಗಳು, ಮತ್ತೆ ಒಂದು ಮನೆಯಲ್ಲಿ ಅಡುಗೆ ಮನೆಯಲ್ಲೇ ನೆಲ ಬಾವಿ ಇತ್ತು. ಸೊ ಇಂತದನ್ನೆಲ್ಲಾ ನಾವು ಚೆನ್ನಾಗಿ ಯೂಸ್ ಮಾಡ್ಕೊಂಡು ಶೂಟ್ ಮಾಡಿದ್ವಿ. ನೈಸರ್ ಅಂತ ಒಂದು ಎಪಿಸೋಡ್, ಒಂದು ಮನೆಯಲ್ಲೇ ಶೂಟ್ ಮಾಡಿದ್ವಿ. ಇಷ್ಟ ಬಂದ ಕಡೆ ಹೋಗಿ, ಶೂಟ್ ಮಾಡ್ತೀವಿ ಅಂದ್ರೆ, “ಓಕೆ” ಅಂದ್ಬಿಡೋರು.


ಆ ಮೇಲೆ ನಾವು ಇರೋದಕ್ಕೆಲ್ಲಾ ಅಲ್ಲೇ ಮನೆಗಳು, ಒಂದು ಮನೆಯಲ್ಲಿ ಇಬ್ಬರು, ಇನ್ನೊಂದ್ರಲ್ಲಿ ಮೂರು ಜನ ಹಾಗೆ. ಅದಕ್ಕೆಲ್ಲಾ ಒಂದೊಂದು ಬೋರ್ಡ್ ಹಾಕೊಂಡ್ಬಿಟ್ವಿ. ತಾಜ್ ರೆಸಿಡೆನ್ಸಿ, ಕಲರಿ ಕಾಂಟಿನೆಂಟಲ್ ಹಿಂಗೆಲ್ಲ. ನಮ್ಮ ಹುಡುಗರಿಗೆ ರಾತ್ರಿ ಊಟ ತರ್ಬೇಕಾದ್ರೆ, “ತಾಜ್ ರೆಸಿಡೆನ್ಸಿಗೆ ಮುರು ಊಟ.” ಹೀಗೆಲ್ಲಾ ಬರೆದು ಸ್ಲಿಪ್ ಕೊಟ್ಬಿಡ್ತಾ ಇದ್ವಿ. ಸೋ ವಿ ಎಂಜಾಯ್ಡ್.


ಪರಮ್: ಸರ್ ನೀವು ಅಲ್ಲಿ ಸ್ಟಾರ್ ಹೋಟೆಲ್ ಕ್ರಿಯೇಟ್ ಮಾಡ್ಕೊಂಡಿದ್ರಿ ಅಲ್ವಾ?


ರಮೇಶ್ ಭಟ್: ಹೌದು. ಸೋ ಹಂಗಾಗಿ ಶರುವಾಯ್ತು. ಇಂಗ್ಲೀಷ್ ಮತ್ತೆ ಹಿಂದಿ ಎರಡು ಭಾಷೆಗಳಲ್ಲೂ ಆಗ್ಬೇಕು. ಒಟ್ನಲ್ಲಿ ಒಂದು ವಾರ ಆಗೋದು, ಒಂದು ಎಪಿಸೋಡ್ ಮುಗ್ಸಕ್ಕೆ. ಈಗ ಒಂದು ಶಾಟ್ ಹಿಂದಿಯಲ್ಲಿ ತೆಗೆದ್ರೆ, ಅದೇ ಶಾಟ್ ನ ಇಂಗ್ಲೀಷಲ್ಲೂ ತಗಿಬೇಕು. ಟೈಮ್ ಬಾಂಡಿಂಗ್, ಕೆಲವು ಎಪಿಸೋಡ್ ಪ್ರಾಬ್ಲಮ್ ಇರೋದು, ಟ್ರಾವಲ್ ಮಾಡ್ಬೇಕಾಗಿರೋದು, ಸೋ ಟೈಮ್ ಸಾಕಾಗಲ್ಲ, ಅಂತ ಆದಾಗ ಟೈಮ್ ಎಕ್ಸಟೆಂಡ್ ಮಾಡೋದು. ನಮ್ಮ ತಂಡದಲ್ಲಿ ಎಲ್ರುನೂ ಹಗಲು, ರಾತ್ರಿ, ಚಳಿ, ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೆ ಕೆಲ್ಸ ಮಾಡಿದ್ವಿ. ಒಂದೊಂದ್ಸಲ ಮಾತಾಡ್ಕೊತಿದ್ವಿ ನಾವು “ಏನೋ ಲೋ ಇಷ್ಟು ಕಡಿಮೆ ದುಡ್ಡಿಗೆ ಒಪ್ಕೊಂಡು ಇಷ್ಟು ಕೆಲ್ಸ ಮಾಡ್ಬೇಕು” ಅಂತ. ಆದ್ರೆ ಒಂದು ಸಲ ಅದು ಜನರ ಮುಂದೆ ಬಂದು ಜನರು ಅದಕ್ಕೆ ತೋರಿಸಿದ ಪ್ರೀತಿ, ಗೌರವ ನೋಡ್ಬಿಟ್ಟು, ಎಲ್ಲಾ ಮರೆತೋಯ್ತು ನಮಗೆ, ಇಂಥದೊಂದು ಪ್ರಾಜೆಕ್ಟಲ್ಲಿ ನಾವು ಇದ್ವಲ್ಲಾ ಅದೇ ಒಂದು ದೊಡ್ಡ ಹೆಮ್ಮೆ!
ಮುಂದುವರೆಯುವುದು…

21 views