ಆಗುಂಬೆ ಮತ್ತು ಅಲ್ಲಿನ ಜನಗಳ ಕೊಆಪರೇಶನ್

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 57

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)
ಪರಮ್: ಇನ್ನು ಊರಿನವರ ಕೊಆಪರೇಶನ್, ಈಗ್ಲೂ ಆಗುಂಬೆ ಅಂದ್ರೆ ಮಾಲ್ಗುಡಿ ಅಂತಾರೆ ಆಕ್ಟುಲಿ….


ಸುಂದರಶ್ರೀ: ಹೌದು ಖಂಡಿತ. ಈಗ್ಲೂ ಆಗುಂಬೆಗೆ ಹೋಗ್ನೋಡಿ, ಈಗ್ಲೂ ಬೆಳೆದಿಲ್ಲ ಆಗುಂಬೆ. ಅವಾಗ 60 ಮನೆಗಳಿದ್ವು. ಈಗ ಇನ್ನೂ ಕಡಿಮೆ ಆಗಿದ್ಯಂತೆ. ಎಲ್ರೂ ಬೆಂಗ್ಳೂರಿಗೆ ಬಂದ್ಬಿಟ್ಟಿದ್ದಾರೆ. ಒಂದು ದೊಡ್ಡ ಮನೆಯಲ್ಲಿ ನಾವು ಬೋರ್ಡ್ ಮಾಡಿರೋದು, ಈಗ್ಲೂ ಹಾಗೇ ಇದೆ. ಅಲ್ಲಿ ಒಬ್ರು ಅಮ್ಮ ಇದ್ದಾರೆ. ಯಾರಾದ್ರೂ ಅತಿಥಿಗಳು ಬಂದ್ರೆ, ಊಟ ಹಾಕಿ ಕಳಿಸ್ತಾರೆ. ಪ್ರತಿಯೊಬ್ಬರದ್ದೂ ಕೊಆಪರೇಶನ್ ತುಂಬಾ ಚೆನ್ನಾಗಿತ್ತು. “ಅಲ್ಲಿ ಹೋಗಿ, ಅವರ ಮನೆಯಿಂದ ಏನಾದ್ರೂ ಸಾಮಾನು ತಗೊಂಡ್ಬನ್ನಿ” ಅಂದ್ರೆ, ಎಲ್ಲಿ ಹೋದ್ರೂ ಕೊಡ್ತಿದ್ರು. ಯಾಕಂದ್ರೆ ಪೀರಿಯೆಡ್ ಅಲ್ವಾ? ಯಾರ ಮನೆಗೆ ಹೋದ್ರೂ ಪೀರಿಯೆಡ್ ಸಾಮಾನುಗಳೇ ಸಿಗ್ತಿತ್ತು. ತಗೊಂಡು ಬಂದು, ಶೂಟಿಂಗ್ ಆದ ತಕ್ಷಣ ವಾಪಸ್ ತಗೊಂಡು ಹೋಗಿ ಕೊಡೋದು. ಒಬ್ರುನೂ ಇಲ್ಲಾಂತ ಹೇಳ್ಳೇ ಇಲ್ಲ. ಅಷ್ಟು ಚೆನ್ನಾಗಿ ನಮಗೆ ಆಗುಂಬೆ ಜನಗಳು ಕೊಆಪರೇಟ್ ಮಾಡಿದಾರೆ.


ಪರಮ್: ಆಗುಂಬೆಯಲ್ಲಿ ಮಳೆ ಜಾಸ್ತಿ, ಅದ್ರಿಂದ ಏನಾದ್ರೂ ತೊಂದರೆ ಆಯ್ತಾ?


ಸುಂದರಶ್ರೀ: ಮಳೆಯಲ್ಲಿ ತೊಂದರೆ ಏನೂ ಆಗ್ಲಿಲ್ಲ. ಆಕ್ಟುಲಿ ಏನಂದ್ರೆ, ನಾವು ಮಳೆಯಲ್ಲೂ ಶೂಟ್ ಮಾಡಿದ್ದೀವಿ. ‘ನಾಗ’ ಮಳೆಯಲ್ಲೇ ಶೂಟ್ ಮಾಡಿರೋದು. ಶಂಕರ್ ಮತ್ತೆ ಮಾಸ್ಟರ್ ಮಂಜು. ನಾನೂ ಆಕ್ಟ್ ಮಾಡಿದ್ದೀನಿ ಅದ್ರಲ್ಲಿ. ಇಡ್ಲಿ ಮಾರುವವಳು ನಾನು. ಮತ್ತೆ ಲೋಕನಾಥ್ ಅವರದೊಂದು ಎಪಿಸೋಡ್ ಇದೆ. ಅದನ್ನ ನಾವು ಮಳೆಯಲ್ಲೇ ಶೂಟ್ ಮಾಡಿರೋದು. ಯಾವುದಕ್ಕೂ ಶಂಕರ್ ಹೆದರ್ತಾ ಇರ್ಲಿಲ್ಲ. “ಹೇ ಮಾಡೋಣ ನಡಿರೋ”ಅಂತಿದ್ರು. ಹೇಳಿದ್ನಲ್ಲ ಮನಸ್ಸಿದ್ದರೆ ಮಾರ್ಗ. ಅದಕ್ಕೇನೇನು ಬೇಕೋ ಅರೇಂಜ್ ಮೆಂಟ್ ಮಾಡ್ಕೊಂಡು ಮಾಡ್ತಿದ್ರು. ಫಸ್ಟ್ ಟೈಮ್ ಸೀರಿಯಲಲ್ಲಿ ಅಂಡರ್ ವಾಟರ್ ಶೂಟ್ ಮಾಡಿರೋದು ನಾವು.ಮುಂದುವರೆಯುವುದು…

16 views