ಆರ್.ಕೆ ನಾರಾಯಣ್‌ ಅವರ ಭೇಟಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 91

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಬದರಿನಾಥ್: ನನ್ನ ಹೆಸರು ‘ಬದರಿನಾಥ್’, ನನ್ನ ತಂದೆ ‘ಟಿ.ಎಸ್. ನರಸಿಂಹನ್’, ರೆಪ್ಯೂಟಡ್ ನೇಮ್ ಇನ್ ಕನ್ನಡ ಫಿಲ್ಮ್ ಇಂಡಸ್ಟ್ರೀ. ಮಾಲ್ಗುಡಿ ಶುರುವಾಗಿದ್ದು ಹೇಗೆಂತಂದ್ರೆ, ಇಟ್ ವಾಸ್ ಒನ್ ಆಫ್ ಅಸ್ ಡ್ರೀಮ್ಸ್. ಫಸ್ಟ್ ನಾವು ಶುರು ಮಾಡಿದ್ದು ‘ಬ್ಯಾಂಕರ್ ಮಾರ್ಗಯ್ಯ’ ಅದು ‘ಆರ್.ಕೆ. ನಾರಾಯಣ್’ ಅವ್ರ ಕತೆ. ನಾನು ಬೆಂಗಳೂರಿನ ‘ವಿಜಯ ಕಾಲೇಜಲ್ಲಿ’ ಓದಿದವನು. ಅವಾಗ ‘ನಾನ್ ಡೀಟೈಲ್ಡ್ ಟೆಕ್ಸ್ಟ್ ಫೈನಾನ್ಶಿಯಲ್ ಎಕ್ಸಪರ್ಟ್’ ಅಂತ ಇತ್ತು. ಬೇರೆ ಯಾವ ಕ್ಲಾಸಲ್ಲೂ ಇಂಟ್ರಸ್ಟ್ ಇರ್ಲಿಲ್ಲ. ಆ ಕ್ಲಾಸಲ್ಲಿ ಯಾಕೆ ಇಂಟ್ರಸ್ಟ್ ಇತ್ತು ಅಂದ್ರೆ, ‘ಎಮ್.ಕೆ. ಕೇಶವಸ್ವಾಮಿ’ ಅಂತ ಲೆಕ್ಚರರ್ ಇದ್ರು. ಅವ್ರು ಕ್ಲಾಸಿಗೆ ಕಚ್ಚೆ ಉಟ್ಕೊಂಡು ಬರ್ತಿದ್ರು. ಒಂದೊಂದು ಪಾತ್ರನೂ ಆಕ್ಟ್ ಮಾಡಿ ತೋರ್ಸ್ತಿದ್ರು. ಅವ್ರ ಕ್ಲಾಸಲ್ಲಿ ಮಾತ್ರ 120 ದಿನಕ್ಕೆ 120 ದಿನ ಕೂಡ ಎಲ್ಲರೂ ಪ್ರಸಂಟ್ ಇರ್ತಿದ್ರು. ಬೇರೆ ಕ್ಲಾಸ್ ಗಳಲ್ಲಿ ಚಕ್ಕರ್ ಹೊಡಿಯೋದು ಎಲ್ಲಾ ನಡಿತಾ ಇತ್ತು.


ಒಂದು ದಿನ ಮನೆಯಲ್ಲಿ ಕೂತ್ಕೊಂಡು ಪುಸ್ತಕ ಓದ್ತಾ ಇದ್ದೆ, ನಮ್ಮಪ್ಪ ಬಂದು “ನೀನೂ ಓದ್ತೀಯೇನೋ” ಅಂತ ಕೇಳಿದ್ರು. ನಾನು “ಯಾಕಪ್ಪಾ?” ಅಂದೆ. ಅದಕ್ಕೆ “ಇಷ್ಟು ಇಂಟ್ರಸ್ಟಲ್ಲಿ ಓದ್ತಾ ಇದ್ದೀಯಲ್ಲ ಏನದು?” ಅಂತ ಕೇಳಿದ್ರು. ಅಪ್ಪ ‘ಫೈನಾನ್ಶಲ್ ಎಕ್ಸಪರ್ಟ್’ ಅಂತ ಆರ್.ಕೆ. ನಾರಾಯಣ್ ಅವ್ರ ಕತೆ, ಚೆನ್ನಾಗಿದೆ ಅದಕ್ಕೇ ಓದ್ತಾ ಇದ್ದೀನಿ ಅಂದೆ. ಆಗ ಸಮಯ ಸಂಜೆ ಏಳು ಗಂಟೆ ಆಗಿತ್ತು. ನಾನು ಅವ್ರಿಗೆ ಪುಸ್ತಕ ಕೊಟ್ಟು ಹೋದೆ. ಬೆಳಗ್ಗೆ ಮೂರುವರೆ ಗಂಟೆಗೆ ಎಬ್ಸಿದ್ರು, “ಮೈಸೂರಿಗೆ ಹೋಗೋಣ ಬಾ” ಅಂದ್ರು. “ಯಾಕಪ್ಪಾ” ಅಂದೆ. “ರೈಟ್ಸ್ ತಗೊಬೇಕು ಕಣೋ ಆರ್.ಕೆ. ನಾರಾಯಣ್ ಅವ್ರ ಹತ್ರ. ಬಹಳ ಇಷ್ಟ ಆಗಿದೆ ಕತೆ ನನಿಗೆ, ಫಿಲ್ಮ್ ಮಾಡ್ಲೇ ಬೇಕು ಇದನ್ನ” ಅಂದ್ರು. ನಾನು ಕೇಳ್ದೆ ”ಏನಪ್ಪಾ ಮೂರುವರೆಗೆ ಮೈಸೂರಿಗೆ ಹೋಗೋಣ ಅಂದ್ರೆ?”. “ಹೋಗೋಣ ಬಾ” ಅಂದ್ರು.


ಅವ್ರು ಹಾಗೇ ಇದ್ದದ್ದು ಒಂದ್ಸಲ ಮನಸ್ಸಿಗೆ ಏನಾದ್ರೂ ಬಂದ್ರೆ ಮಾಡ್ಲೇ ಬೇಕು. ವೆರಿ ಫರ್ಮ್ ಆಂಡ್ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನೋನ್ಡ್ ಆಸ್ ಮೋಸ್ಟ್ ಸ್ಟ್ರಿಕ್ಟ್ ಆಂಡ್ ಡಿಸಿಪ್ಲೀನ್ಡ್. ಅವ್ರ ರೂಲ್ಸ್ ಅಂದ್ರೆ ರೂಲ್ಸ್, ಅದನ್ನ ಯಾರೂ ಬ್ರೇಕ್ ಮಾಡಕ್ಕಾಗಲ್ಲ. ಸೋ ಮ್ಯಸೂರಿಗೆ ಹೋದ್ವಿ, ಅಫ್ಕೋರ್ಸ್, ಆರ್.ಕೆ.ನಾರಾಯಣ್ ಅವ್ರನ್ನ ಫಸ್ಟ್ ಮೀಟ್ ಮಾಡಕ್ಕೆ ಆಗ್ಲಿಲ್ಲ. ಅವ್ರಿಗೆ ’ಗೈಡ್’ ಆಗಿತ್ತು. ಯಾಕಂದ್ರೆ ಶುರುನಲ್ಲಿ ಸುಮಾರು ಡ್ಯೂರೇಷನ್ ಇತ್ತು. ಅವ್ರು ಅಪ್ರೂವಲ್ ತಗೊಳ್ಳಿಲ್ಲ, ಪ್ಲಸ್ ನನಗನ್ನಿಸಿದ್ದು ಫೈನಾನ್ಶಿಯಲ್ಲಿ ಅವ್ರಿಗೆ ಏನೋ ಸರಿ ಹೋಗ್ಲಿಲ್ಲ. ಸೋ ಹೀ ಹ್ಯಾಡ್ ಡಿಸೈಡಡ್ ದಟ್ ಫಿಲ್ಮ್ ಇಂಡಸ್ಟ್ರೀ ಅವ್ರ ಜೊತೆ ನನಿಗೆ ಕನೆಕ್ಷನ್ ಬೇಡ ಅಂತ. ನಾನು, ನನ್ನ ತಂದೆ, ಮತ್ತೆ ನನ್ನ ತಾಯಿ ಮೂರೇ ಜನ ಹೋಗಿದ್ದು ಅವ್ರ ಮನೆಗೆ, ಮೊದ್ಲು ಸ್ವಲ್ಪ ಹೊತ್ತು ಕಾಯಿಸಿದ್ರು ಆಚೆ.


ಆಮೇಲೆ ಬಂದು ನಮ್ಮ ತಾಯಿಯವರನ್ನ ನೋಡಿ ಬನ್ನಿ ಅಂದ್ರು. ಆಮೇಲೆ ನಮ್ಮ ತಂದೆ ಇಂಟ್ರಡ್ಯೂಸ್ ಮಾಡ್ಕೊಂಡ್ರು. ನಮ್ಮ ತಂದೆಯವರ ಎಲ್ಡರ್ ಬ್ರದರ್ ‘ಕೆ.ಎಸ್. ರಾಘವನ್’ ಅಂತ, ಅವ್ರು ಜನರಲ್ ಸೆಕ್ರೇಟರಿ ಆಫ್ ನ್ಯಾಶನಲ್ ಎಜ್ಯುಕೇಶನ್ ಸೊಸೈಟಿ. ಸೋ ಫ್ರೀಡಮ್ ಮೂವ್ಮೆಂಟಿಗೆಲ್ಲಾ ನಮ್ಮ ತಾತ ನಮ್ಮ ದೊಡ್ಡಪ್ಪ ಭಾಗಿಯಾಗಿದ್ದಾರೆ. ‘ದಾರಿವಾಲ್ ಏಜನ್ಸಿ’ ಆಂತ ಇತ್ತು. ಫ್ಯಾಮಿಲಿ ನೇಮ್ ಆಫ್ ದಾರಿವಾಲ್ ಈಸ್ ವೆರಿ ಫೇಮಸ್, ಸೋ ನಾರಾಯಣ್ ಅದ್ನ ಕೇಳ್ಬಿಟ್ಟು, “ ಓ ನೀವು ದಾರಿವಾಲ್ ಫ್ಯಾಮಿಲಿನಾ? ನನಿಗೆ ಗೊತ್ತಾಗ್ಲಿಲ್ಲ” ಯಾರು ಏನೂಂತ ವಿಚಾರ್ಸಿದಾಗ ರಾಘವನ್ ಅವ್ರು ನಮ್ಮ ತಂದೆಯವರ ಎಲ್ಡರ್ ಬ್ರದರ್ ಅಂತ ಹೇಳಿದ್ವಿ. ಆಗ ಅವ್ರು ಹೇಳಿದ್ರು “ ರೈಟ್ಸ್ ಕೊಡ್ತೀನಿ ಆದ್ರೆ ಕಂಡೀಷನ್ ಇದೆ, ವಿದಾವ್ಟ್ ಶೂಟ್ ಅಪ್ರೂವಲ್ ಯು ಕೆನಾಟ್ ಶೂಟ್, ಕಂಪ್ಲೀಟ್ ಸ್ಕ್ರಿಪ್ಟ್ ವರ್ಕಿಂಗ್ ಮಾಡಿ ತಗೊಂಡು ಬನ್ನಿ. ಆಂಡ್ ಪೇಮೆಂಟ್ ಶುಡ್ ಬಿ ಡನ್” ಅಂದ್ರು. ನಮ್ಮಪ್ಪ ಹೇಳಿದ್ರು “ಇಲ್ಲೇ ಚಕ್ ಬುಕ್ ಇದೆ ನೀವು ಎಷ್ಟು ಹೇಳ್ತಿರ ಈಗ್ಲೇ ಬರ್ಕೊಟ್ಟು ಬಿಡ್ತೀನಿ” ಅದಕ್ಕೆ ನಾರಾಯಣ್ ನಗುನಗ್ತಾ ಹೇಳಿದ್ರು ‘ಚೆಕ್ ಎಲ್ಲರೂ ಬರಿತಾರೆ, ಚೆಕ್ ಪಾಸ್ ಆಗುತ್ತಾ?” ನಮ್ಮಪ್ಪ ಹೇಳಿದ್ರು “ ಆ ರೆಪಿಟೇಶನ್ ಇದೆ ನಮಿಗೆ”ಮುಂದುವರೆಯುವುದು…

15 views