ಆವತ್ತು ಸಿದ್ಧರಾಮಯ್ಯನವ್ರು ಚಿತ್ರರಂಗದ ಭೀಷ್ಮ ಎಂದು ಯಾರಿಗೆ ಹೇಳಿದ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 120

(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


‘ತಾರಕ್‌’ ಚಿತ್ರ ರೇಣುಕಾಂಬದಲ್ಲಿ ಪ್ರೀಮಿಯರ್‌ ಶೋ ಇತ್ತು. ಸಿದ್ದರಾಮಯ್ಯ ಅವರು ಬಂದಿದ್ದರು. ಚಿತ್ರ ಮುಗಿದ ಮೇಲೆ ಪ್ರೊಡ್ಯೂಸರ್‌, ಡೈರೆಕ್ಟರ್‌ ಇಬ್ಬರೂ ಬಂದು, ಸಿದ್ದರಾಮಯ್ಯ ಅವರ ಬಳಿ, ಹೇಗಿದೆ ಸಿನಿಮಾ ಎಂದು ಕೇಳಿದರು. ಆಗ ಅವರು ನನ್ನ ಭುಜದ ಮೇಲೆ ಕೈ ಹಾಕಿ ನನ್ನನ್ನು ಏನು ಕೇಳುತ್ತೀರಾ? ಚಿತ್ರರಂಗದ ಭೀಷ್ಮ ಇಲ್ಲಿದ್ದಾರೆ ಅವರನ್ನು ಕೇಳಿ. ನನ್ನ ಅಭಿಪ್ರಾಯ ಕಟ್ಟಿಕೊಂಡು ಏನು ಮಾಡುತ್ತೀರಾ ಎಂದ್ರು. ಆಗ ನನ್ನ ಮೈ ಪುಳಕಿತವಾಯಿತು. ಆಗ ಅವರು ಮುಖ್ಯಮಂತ್ರಿಯಾಗಿದ್ದರು. ಅವರ ಬಾಯಲ್ಲಿ ಹಾಗೆ ಅನಿಸಿಕೊಳ್ಳಲು ನಾನೆಷ್ಟು ಪುಣ್ಯ ಮಾಡಿರಬೇಕು. ಇಂಥ ಹೆಸರು ಗಳಿಸಲು ರಾಜ್‌ಕುಮಾರ್‌ ಅವರೇ ಕಾರಣ. ನನ್ನ ಅಭಿವೃದ್ಧಿಗೆ ಅವರೇ ಕಾರಣ.ಮುಂದುವರೆಯುವುದು...

20 views