ಆಸ್ಟ್ರೇಲಿಯಾದಲ್ಲಿ ಮೈಸೂರಿನ ಕಥೆ

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 42ಒಮ್ಮೆ ಆಸ್ಟ್ರೇಲಿಯಾದಲ್ಲಿ ನಾನು, ರಾಜು ಅನಂತಸ್ವಾಮಿ ಕೂತಿದ್ವಿ. ಫ್ಲೈ ಓವರ್‌ ಎಂಜಿನಿಯರ್‌ ಒಬ್ಬರು ಬಂದು, ರೀ ಯಾವೂರು ನಿಮ್ದು ಎಂದ. ಮೈಸೂರು ಎಂದ್ವಿ. ಮೈಸೂರು ಸರಿಯಿಲ್ಲ ಎಂದ. ಯಾಕೆ ಎಂದ್ರೆ, ಟೆಕ್ನಿಕಲಿ ನಾಟ್‌ ಓಕೆ ಎಂದ. ಅಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಯಿಷಾಸುರನನ್ನು ನೋಡಿದ್ದೀರಾ? ಅದು ಸರಿಯಿಲ್ಲ ಎಂದ. ಯಾಕೆ ಎಂದ್ರೆ, ಅವನು ಚಾಕು ಹಿಡಿದುಕೊಂಡಿದ್ದಾನಲ್ವಾ ಆ ಚಾಕು ಬೆಂಡಾಗಿದೆ. ಸೊಂಟದಲ್ಲಿ ಕವರ್‌ ನೇರವಾಗಿದೆ ಎಂದ. ನಾನು ಮೈಸೂರಿನವನು ಬಿಟ್ಟುಕೊಡಲು ಆಗುವುದಿಲ್ಲ. ಅದಕ್ಕೆ, ಅದು ಸರಿಯಿದೆ. ಚಾಕು ತೆಗೆದು ಯಾರಿಗೊ ಹೊಡೆದಿದ್ದಾನೆ. ಅದು ಬೆಂಡಾಗಿದೆ ಅದಕ್ಕೆ ಕೈಯಲ್ಲಿಯೇ ಹಿಡಿಕೊಂಡಿದ್ದಾನೆ. ಒಳಗೆ ಇಟ್ಟಿಲ್ವಲ್ಲಾ ಎಂದೆ. ಹೀಗೆ, ನಮ್ಮೂರು, ನಮ್ಮ ಭಾಷೆ, ಧರ್ಮ, ಶೈಲಿಯನ್ನು ಬಿಟ್ಟುಕೊಡಬಾರದು. ಹಾಗೆಂದು, ಬೇರೆಯವರನ್ನು ಹೀಯಾಳಿಸಬಾರದು.


ಮುಂದುವರಿಯುವುದು...

21 views