ಆ ಕಾಲದ ಅತಿ ಸುಂದರಿ ಈ ನಟಿ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 70


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
ಲೀಲಾವತಿ ಅವರಂಥ ಸುಂದರಿಯಾದ ನಟಿ ಆ ಕಾಲದಲ್ಲಿ ಇರಲಿಲ್ಲ. ಅವರು ಮಂಗಳೂರಿನವರಾದ್ದರಿಂದ ಅಲ್ಲಿಯ ಭಾಷಾ ಸೊಗಡು ಅವರ ಮಾತಿನಲ್ಲಿತ್ತು. ನಂತರದಲ್ಲಿ ಇಲ್ಲಿಯ ಭಾಷಾ ಶೈಲಿಯನ್ನು ಕಲಿತುಕೊಂಡರು. ಬಹಳ ಒಳ್ಳೆಯ ಕಲಾವಿದೆ ಆಕೆ. ಹೊಸ ಸಿನಿಮಾ ಮಾಡುವಾಗ ಲೀಲಾವತಿ ಆ ಪಾತ್ರಕ್ಕೆ ಹೊಂದಿಕೆಯಾಗುತ್ತಾರಾ ನೋಡಿ ಎಂದು ರಾಜ್‌ಕುಮಾರ್‌ ಮತ್ತು ಪಾರ್ವತಮ್ಮನವರು ಹೇಳುತ್ತಿದ್ದರು.
ಮುಂದುವರೆಯುವುದು...

35 views