ಆ ಕಾಲದ “ಕೋಮಲ್‌ ಪ್ರೊಡಕ್ಷನ್‌ ಹೌಸ್” ಕತೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 92

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ‘ಕೋಮಲ್ ಪ್ರೊಡಕ್ಷನ್’ ಅಂದ್ರೆ ಇನಕ್ಲೂಡಿಂಗ್ ನಮ್ಮ ಕ್ಯಾಬ್ ಡ್ರೈವರ್ ಇಂದ ಹಿಡ್ದು, ಯಾರೇ ಆದ್ರೂ ನಮ್ಮ ಪ್ರೊಡಕ್ಷನ್ ಅಂದ್ರೆ ಏನೂ ಮಾತಾಡಲ್ಲ. “ಬರ್ತೀವಿ ನೀವು ಪೇಮೆಂಟ್ ಕೊಡ್ತೀರ”. ಹತ್ತು ರೂಪಾಯಿ ಪ್ರಾಮಿಸ್ ಮಾಡಿದ್ರೆ ಹತ್ತು ರೂಪಾಯಿ, ನಮ್ಮ ಅಪ್ಪ ಎಲ್ಲಾ ಟೆಕ್ನೀಶಿಯನ್ಸ್ ಹತ್ರನೂ ಕಾಂಟ್ರಾಕ್ಟ್ ಮಾಡ್ಕೊಳ್ಳೋದು ನಮ್ಮ ಅಪ್ಪನ ಹ್ಯಾಬಿಟ್. ಅದ್ರ ಪ್ರಕಾರ ದುಡ್ಡು ಕೊಟ್ಬಿಡ್ತಾ ಇದ್ರು. ಆ ರೆಪಿಟೇಶನ್ ಇತ್ತು.


ಆಂಡ್ ಹೀ ಹ್ಯಾಡ್ ಸವರಲ್ ಅವಾರ್ಡ್ಸ್. ನಮ್ಮಪ್ಪನ ಫಸ್ಟ್ ಫಿಲ್ಮ್ ‘ಕೆಸರಿನ ದಮನ’ 1971 ರಲ್ಲಿ ಮಾಡಿದ್ರು. ಅದ್ರಲ್ಲಿ, ಸುಧಾ ನಾಗರಾಜ್ ಮತ್ತೆ ಕಲ್ಪನಾ, ಆರ್.ಎನ್. ಜಯಗೋಪಾಲ್ ಅವ್ರ ಡೈರಕ್ಷನ್, ಬ್ಲಾಕ್ ಅಂಡ್ ವೈಟ್ ಫಿಲ್ಮ್.. ಅದಾದ ನಂತರ ಹಿ ಡಿಡ್ ‘ದಂಗೆ ಎದ್ದ ಮಕ್ಕಳು’ ಪಿ. ವಾದಿರಾಜ್ ಡೈರಕ್ಟ್ ಮಾಡಿದ್ದು. ಕಮರ್ಷಿಯಲ್ ಆಗಿ ಅಷ್ಟೇನೂ ವರ್ಕ್ ಆಗ್ಲಿಲ್ಲ. ನಮ್ಮ ತಂದೆ ಅವ್ರು ಯಾವಾಗ್ಲೂ ಹೇಳ್ತಿದ್ರು, ನಾವು ಸಿನಿಮಾ ಮಾಡುವಾಗ ನಮ್ಮ ಜನಗಳಿಗಾಗಿ ಮಾತ್ರ ಮಾಡ್ಬಾರ್ದು, ಇಡೀ ಪ್ರಪಂಚನೇ ನೋಡುವ ಹಾಗೆ ಇರ್ಬೇಕು. ಆಗ ಜನ ನಗ್ತಿದ್ರು. ಕನ್ನಡ ಸಿನಿಮಾನ ಬೇರೆ ಕಡೆ ಹೇಗೆ ನೋಡ್ತಾರೆ ಅಂತ. ‘ದಂಗೆ ಎದ್ದ ಮಕ್ಕಳು’ ಆಗಿನ ಕಾಲದಲ್ಲಿ ರಷ್ಯಾ ಗೆ ಹೋಯ್ತು. ರಷ್ಯಾ ದವ್ರು ಬಂದು ಮೂವತ್ತು ಪ್ರಿಂಟ್ ತಗೊಂಡು ಹೋದ್ರು. ಅವ್ರಿಗೆ ಅಷ್ಟು ಇಷ್ಟ ಆಯ್ತು. ಅವಾಗ ಈ ನ್ಯೂಸ್ ಬ್ರೇಕಿಂಗ್ ಆಯ್ತು, ಅಪ್ಪನೂ ಯೋಚ್ನೆ ಮಾಡ್ತಿದ್ರು.


ನಮ್ಮಪ್ಪನ ಪಾರ್ಟ್ನರ್ ‘ಬಿ.ಎಸ್.ಸೋಮಸುಂದರ್’ ವಿಷ್ಣುವರ್ಧನ್ ಅವರ ‘ಹೊಂಬಿಸಿಲು’ ಪ್ರೊಡ್ಯೂಸರ್’. ಅವ್ರು ಲಾಯರ್. ನಮ್ಮ ಬಸವನಗುಡಿ ಮನೆಯ ಪಕ್ಕದ ರೋಡಲ್ಲೇ ವಾಸ ಇದ್ರು. ನಮ್ಮಪ್ಪ ಮತ್ತೆ ಅವ್ರು ಬಿಕಮ್ ಕ್ಲೋಸ್ ಫ್ರೆಂಡ್ಸ್. ಅವ್ರಿಬ್ರೂ ಯೋಚ್ನೆ ಮಾಡಿ ಹೇಳಿದ್ರು ಇಷ್ಟು ಮಾಡಿದೀವಿ ಕಮರ್ಷಿಯಲ್ ಒಂದು ಮಾಡೋಣ ಅಂತ. ‘ಬಂಗಾರದ ಜಿಂಕೆ’ ಆರತಿ, ಭಾರತಿ, ವಿಶ್ಣುವರ್ಧನ್ ಎಲ್ಲಾರ್ನೂ ಹಾಕೊಂಡು ‘ನಾಗಾಭರಣ’ ಡ್ಯರೆಕ್ಷನ್. ನಾಗಾಭರಣ ಅವ್ರ ಫಸ್ಟ್ ಕಮರ್ಷಿಯಲ್ ಸಿನಿಮಾ. ಸುಮಾರಾಗಿ ಸಕ್ಸಸ್ ಸಿಗ್ತು. ಚೆನ್ನಾಗೇ ಹೋಯ್ತು. ಅದಾದ್ಮೇಲೆ ಸ್ವಲ್ಪ ಗ್ಯಾಪ್ ತಗೊಂಡ್ರು. ನಂತರ ‘ಬ್ಯಾಂಕರ್ ಮಾರ್ಗಯ್ಯ’ ಮಾಡಿದ್ರು. ಅದು ಕೂಡ ಕಮರ್ಷಿಯಲ್ಲೀ ಅಷ್ಟು ಸಕ್ಸಸ್ ಅಲ್ಲ, ಬಟ್ ಬ್ರೇಕಿಂಗ್ ಆಯ್ತು, ನೋ ಲಾಸ್.


ನಮ್ಮಪ್ಪ ಬಿಡ್ಲೇ ಇಲ್ಲ, ಹೀ ಸೆಡ್ “ಇಲ್ಲ ವಿದೇಷಕ್ಕೆ ಹೋಗ್ಲೇಬೇಕು, ಜನ ನೋಡ್ಲೇ ಬೇಕು” ಅದಕ್ಕೆ ನ್ಯಾಶನಲ್ ಹಾಗೂ ಇಂಟರ್ ನ್ಯಾಷನಲ್ ಅವಾರ್ಡ್ಗಳು ಬಂತು. ಅವ್ರು ಮುಂಚೆಯಿಂದಲೇ ಹೇಳ್ತಿದ್ರು “ಫಿಲ್ಮ್ ಫೆಸ್ಟಿವಲ್ ಗೆ ಕರ್ನಾಟಕದಿಂದ ಯಾಕೆ ಯಾರೂ ಹೋಗ್ತಿಲ್ಲ, ಯಾಕೆ ನಮ್ಮ ಸ್ಟೇಟ್ ರೆಪ್ರಸಂಟ್ ಆಗಲ್ಲ. ಹೋಗಿ ಕೂತು ಧೈರ್ಯವಾಗಿ ಮಾತಾಡ್ಬೇಕು?” ಹಾಗೇ ಹೋಗ್ತಿದ್ರು. ಖರ್ಚು ಕೂಡ ಬಹಳನೇ ಆಗ್ತಾ ಇತ್ತು, ಸಿಕ್ಕಾ ಪಟ್ಟೆ ಕಷ್ಟ ಇತ್ತು. ಬಟ್ ನಮ್ಮ ಅಪ್ಪನಿಗೆ ಮೊದಲಿನಿಂದಲೇ ಇತ್ತು ಕನ್ನಡ ಶುಡ್ ಗುಡ್ ಅಂತ.ಮುಂದುವರೆಯುವುದು…

8 views