“ಆಂಬಿಯನ್ಸ್‌ ಕ್ರಿಯೇಟ್‌” ಮಾಡೋದು ಹೇಗೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 37

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಈಗ ದೇವಸ್ಥಾನದ ಎದುರುಗಡೆ ಸೀನ್ ಇದ್ರೆ, ದೇವಸ್ಥಾನಕ್ಕೆ ಹೋಗುವವ್ರೂ ಬರುವವ್ರೂ ತುಂಬಾ ಜನ ಇರ್ತಾರೆ. ಒಂದು ಜಗ್ಲಿ ಇದ್ರೆ ಅದರ ಮುಂದೆ ಜನ ಓಡಾಡ್ತಾ ಇರೋರು. ಒಂದು ಸಂತೆ ಇದ್ರೆ, ಯಾರೋ ಒಬ್ಬ ಕುದುರೆಗೆ ಹುಲ್ಲು ತಿನ್ನಿಸ್ತಾ ಇರ್ತಾನೆ. ಒಬ್ಬ ಸನ್ಯಾಸಿ ಏನೋ ಜಪ ಹೇಳ್ಕೊಂಡು ಹೋಗ್ತಾ ಇರ್ತಾನೆ. ಅಂದ್ರೆ ನಿಮ್ಗೆ ಆ ಲೊಕೇಶನಲ್ಲಿ ಇದು ನಿಜವಾಗಿ ನಡಿತಾ ಇದೆ ಅಂತ ಅನಿಸಬೇಕು.

ಈಗೆಲ್ಲಾ ಡಿಸ್ಟ್ರಾಕ್ಷನ್ ಆಯ್ತಾ “ಕಳಿಸ್ರೀ ಎಲ್ಲರನ್ನ ಅಂತ” ಖಾಲಿ ಇರೋದನ್ನ ಶೂಟ್ ಮಾಡ್ತಾರೆ. ಇಲ್ಲಿ ಆ ತರದ್ದು ಇಲ್ವೇ ಇಲ್ಲ. ಯು ಕ್ಯಾನ್ ಸೀ ದ ಪೀಪಲ್ ವಿತ್ ಆಕ್ಟಿವಿಟಿ. ಒಬ್ಬ ಪಾಸ್ ಆಗ್ತಿದ್ರೆ, ಒಂದು ಪರ್ಪಸ್ ಇರುತ್ತೆ. ಯಾಕೆ ಹೋಗ್ತಿದ್ದಾನೆ ಅಂದ್ರೆ ಅದಕ್ಕೆ ಒಂದು ಅರ್ಥ ಗೊತ್ತಾಗುತ್ತೆ. ಸೋ ಈ ತರ ಎಲ್ಲಾ ಆಂಬಿಯನ್ಸ್ ಕ್ರಿಯೇಟ್ ಮಾಡಿದ್ರಿಂದ ಅದು ಬಹಳ ವಿಷೇಷವಾಗಿ ಕಾಣಿಸ್ತು, ಅಂತ ಅನ್ಸುತ್ತೆ. ಜನರ ಮಧ್ಯನೇ ನಡಿತಾ ಇದೆ ಎಲ್ಲವೂ ಅನ್ನೋದು, ಬಹಳ ಇಂಪಾರ್ಟೆಂಟ್. ಸ್ವಾಮಿ ಏನಾದ್ರೂ ಮಾತಾಡ್ತಿದ್ದಾನೆ ಅಂದ್ರೆ, ಆ ಕಡೆ ಕಟ್ಟೆಮೇಲೆ ಕೂತ್ಕೊಂಡಿರ್ತಾರೆ ಜನ, ಒಬ್ಬ ಎದ್ಹೋಗ್ತಾನೆ ಇನ್ಯಾರೋ ಜಗಳ ಆಡ್ಕೊಂಡು ಬರ್ತಾರೆ. ಏನಾದ್ರೊಂದು ನಡಿತನೇ ಇರುತ್ತೆ ಹಿಂದ್ಗಡೆ. ಆ ಸೀಕ್ವೆನ್ಸಿಗೆ ಮ್ಯಾಚ್ ಆಗುವ ತರ ಇದನ್ನೆಲ್ಲಾ ಸೃಷ್ಟಿ ಮಾಡ್ತಾ ಇದ್ವಿ.ಮುಂದುವರೆಯುವುದು…

11 views