ಆ ಲೈಟ್‌ ಮನ್ ಸ್ಥಿತಿ ನೋಡಿ ಕಣ್ಣೀರು ಬಂದಿತ್ತು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 55ಚಿತ್ರೀಕರಣದ ವೇಳೆ ಬೇರೆ ಭಾಷೆಯ ನಟಿ, ದುಬಾರಿ ಚಾಕಲೆಟ್‌ ತಂದಿದ್ರು. ಎಲ್ಲರಿಗೂ ಕೊಟ್ರು. ಎಲ್ಲರೂ ತಿಂದ್ವಿ. ಹೀರೊಯಿನ್ ಅಸಿಸ್ಟೆಂಟ್‌, ಆ ಲೈಟ್‌ಮೆನ್‌ ಐದಾರು ಚಾಕೊಲೆಟ್‌ ಜೇಬಿನಲ್ಲಿ ಹಾಕಿಕೊಂಡು ಹೋಗ್ತಿದ್ದಾರೆ ನೋಡಿ ಎಂದ. ಆ ಹುಡುಗನನ್ನು ಹಿಡಿದ್ರು. ನೋಡಿದ್ರೆ, ಬಿಸಾಕಿರುವ ಚಾಕೊಲೆಟ್‌ ಕವರ್‌ಗಳನ್ನು ತೆಗೆದುಕೊಂಡಿದ್ದ. ಯಾಕಂದ್ರೆ, ಆ ಚಾಕೊಲೆಟ್‌ ಕವರ್‌ ಒಳಗೆ ಬೇರೆ ಚಾಕೊಲೆಟ್‌ ಹಾಕಿ ಮಗನಿಗೆ ಹಿರೋಯಿನ್‌ ಕೊಟ್ರು ಎಂದು ಕೊಡುತ್ತೇನೆ ಎಂದ. ಬಹಳ ಬೇಸರವಾಯ್ತು. ಆಮೇಲೆ ಅಲ್ಲಿದ್ದ ಕೆಲವು ಚಾಕೊಲೆಟ್‌ ಅವನಿಗೆ ಕೊಟ್ರು. ಆದರೆ, ಆ ಸಂದರ್ಭದಲ್ಲಿ ಅವನಿಗಾದ ಅವಮಾನ?...ಮುಂದುವರೆಯು ವುದು...

18 views