ಇದ್ದ 36 ವರ್ಷದಲ್ಲಿ ಏನೆಲ್ಲಾ ಮಾಡಿದ್ರು ಶಂಕರ್?

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 48

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಬರೀ ಮೂವತ್ತಾರು ವರ್ಷ ಅವ್ರಿಗೆ ಆಗ? 36 ವರ್ಷಕ್ಕೆ 86 ಸಿನಿಮಾ, ಒಂದು ಮಾಲ್ಗುಡಿ ಡೇಸ್, ಎಷ್ಟೋ ಸಿನಿಮಾದಲ್ಲಿ ಆಕ್ಟಿಂಗ್, ಡೈರೆಕ್ಷನ್, ನಾಟಕ…?


ರಮೇಶ್ ಭಟ್: ನಾಗಮಂಡಲಕ್ಕಿಂತ ಒಂದು ನಾಟಕ ಬೇಕಾ? 360 ಡಿಗ್ರೀಯಲ್ಲೂ ನಾಟಕ. ಓಪನ್ ಏರ್ ಥಿಯೇಟರಲ್ಲಿ ನಾಟಕ ಮಾಡಿದ್ದು. ಅಂದ್ರೆ ನಾಟಕ ಎಲ್ಲಿ ಜನ ಕೂತಿದ್ದಾರೆ ಅಲ್ಲಿ ಅಂತಲ್ಲ. ಇಲ್ಲಿ ಒಂದು ಸೀನ್ ಆದ್ರೆ, ಅಲ್ಲಿ ಒಂದು ಸೀನ್ ಆಗುತ್ತೆ. ಇನ್ನೊಂದು ಕಡೆ ಇನ್ನೊಂದು ಸೀನ್ ಆಗುತ್ತೆ. ಯಾರಿಗೂ ಚೇರ್ ಹಾಕಿರ್ಲಿಲ್ಲ. ಹಾಸಿಗೆ ಹಾಸಿದ್ವಿ. ಹಾಸಿಗೆ ಮೇಲೆ ಕೂತ್ಕೊಂಡು ಎಲ್ಲರೂ ನಾಟಕ ನೋಡಿದ್ರು. ಒಂದು ಶೋಗೆ ಬಂದಿದ್ದ ಜನ, “ಇನ್ನೊಂದು ಶೊ ಮಾಡಿ ನಾವು ಹೋಗಲ್ಲ ಅಂತ ಜಗಳ ಮಾಡಿದ್ರು”. ಆಮೇಲೆ ಇನ್ನೊಂದು ಶೊ ಮಾಡಿದ್ವಿ. ಎರಡನೇ ಶೋ ಆದ್ಮೇಲೆ ಮೂರನೇ ಶೋಗೆ ಜನ ಒತ್ತಾಯ ಮಾಡಿದ್ರು. ಆಮೇಲೆ “ಆಗಲ್ಲ ಸ್ಟ್ರೇನ್ ಆಗಿದೆ” ಅಂದ್ವಿ. ಚಿತ್ರಕಲಾ ಪರಿಷತ್ ಅಲ್ಲಿ ದಿನಕ್ಕೆ ಎರಡೆರಡು ಶೊ ಮಾಡ್ತಿದ್ವಿ. 360 ಡಿಗ್ರಿ ನಾಟಕ. ನಾಟ್ಯ ಶಾಸ್ತ್ರದಲ್ಲಿರೋದು ಒಂದು ವೇದಿಕೆ. ಸೈಡ್ ವಿಂಗ್ ಮುಂದೆ ಪ್ರೇಕ್ಷಕರು. ಇಲ್ಲಿ ಹಂಗಲ್ಲ ಎಲ್ಲಾ ಕಡೆ ಪ್ರೇಕ್ಷಕರು. ಎಲ್ಲಾ ಕಡೆ ಸ್ಟೇಜೆ. ದೊಡ್ಡ ಕ್ರಿಯೇಟರ್ ಸರ್ ಅವ್ರು! ವಿ ಲಾಸ್ಡ್ ಹಿಮ್!ಮುಂದುವರೆಯುವುದು…

10 views