ಇಂಡಸ್ರ್ಟಿ ಅಲ್ಲಿ ಆಗೀನ ಪೇಮೆಂಟ್ಗು ಈಗಿನ ಪೇಮೆಂಟ್ಗು ತುಂಬಾ ವ್ಯತ್ಯಾಸ!!!

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 17ಅವಾಗ ನಂದು ಮತ್ತೆ ಜಗ್ಗೇಶ್ ಕಾಂಬಿನೇಶನ್ ಸ್ವಲ್ಪ ಸ್ಟಾರ್ಟ್ ಆಯ್ತು. ನಂತರ ಜಗ್ಗೇಶ್ ಯಾವುದೇ ಪಿಚ್ಚರ್ ಮಾಡಿದ್ರೂ ನಾನು ಇರ್ತಿದ್ದೆ. ಅಪ್ಪ, ಚಿಕ್ಕಪ್ಪ, ಮಾವ ಈ ರೀತಿಯಲ್ಲಿ ನಮ್ಮ ಕಾಂಬಿನೇಶನ್ ಬೆಳೆದು ಬಿಡ್ತು. 1991ರಿಂದ 1994ರ ವರೆಗೂ ಫುಲ್ ಬ್ಯುಸಿ ಆಗ್ಬಿಟ್ಟೆ.


ಪರಮ್: ನಿಮ್ಗೂ ಜಗ್ಗೇಶ್‍ಗೂ ಬಂಪರ್?


ಬ್ಯಾಂಕ್ ಜನಾರ್ಧನ್: ಬಂಪರ್ ನಂಗೂ ಜಗ್ಗೇಶ್‍ಗೂ. ಆದರೆ ಅವಾಗ ಅಷ್ಟು ದುಡ್ಡು ಸಿಗ್ತಾ ಇರ್ಲಿಲ್ಲ ನಮಗೆ. ಯಾಕಂದ್ರೆ ಆಗ ಸಿನಿಮಾಕ್ಕೆ ಬಡ್ಜೆಟ್ ಕಮ್ಮಿ ಇತ್ತು. ಸಬ್ಜೆಕ್ಟ್ ಇತ್ತು. ವಿಷ್ಣುವರ್ಧನ್‍ಗೆ ಮೂವತ್ತು ಸಾವಿರ ಅಂದ್ರೆ ಲೆಕ್ಕ ಹಾಕಿ.


ಪರಮ್: ಪೇಮೆಂಟ್?


ಬ್ಯಾಂಕ್ ಜನಾರ್ಧನ್: ನಮಗೆ ಏನು ಅಂತ ಕೊಡ್ತಾ ಇದ್ರು ಅವಾಗ? ಮೊದಲು ಡೈಲಿ ಪೇಮೆಂಟ್ ಇರ್ಲಿಲ್ಲ. ಒಂದು ಪಿಚ್ಚರ್‍ಗೆ ಇಷ್ಟು ಅಂತ ಕೊಡ್ತಿದ್ರು.


ಪರಮ್: ಪ್ಯಾಕೇಜ್?


ಬ್ಯಾಂಕ್ ಜನಾರ್ಧನ್: ಪ್ಯಾಕೇಜ್. ಅದು ಮೂರು ತಿಂಗಳಾಗ್ಬೋದು, ಆರು ತಿಂಗಳೋ, ಎಂಟು ತಿಂಗಳಾದ್ರೂ ಆಗ್ಬೋದು. ಏನು ಮಾತಾಡಿರ್ತೀವೋ ಅದೇ ಪೇಮೆಂಟ್.ಮುಂದುವರೆಯುವುದು…

67 views