ಇಂಡಿಯಾದಲ್ಲೇ ಫಸ್ಟ್‌ ಅಂಡರ್‌ ವಾಟರ್‌ ಶೂಟಿಂಗ್‌ ಮಾಡಿದ್ದು ನಾನೇ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 61

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)ಪರಮ್: ಶಂಕರ್‌ ಇದು ಬೇಕೂಂತ ಹೇಳಿ ಹೋಗ್ತಿದ್ರಾ?


ಜಾನ್ ದೇವರಾಜ್: ಹೌದು, ಒಂದು ಕಥೆ ಹೇಳ್ತೀನಿ ಕೇಳಿ. ನಾವು ಬೆಳಗ್ಗೆ ಎದ್ದು ಹಲ್ಲುಜ್ಜಕ್ಕೆ ಹೊಳೆ ಹತ್ರ ಹೋಗಿದ್ವಿ. ಅಲ್ಲಿ ಹೊಳೆ ಹರಿತಾ ಇದೆ, ಎರಡು ಅಡಿ ನೀರಿದೆ. ಶಂಕರ್ “ಇಲ್ಲಿ ಯಾಕೆ ನಾವು ಅಂಡರ್ ವಾಟರ್ ಶೂಟ್ ಮಾಡ್ಬಾರ್ದು?” ಅಂದ್ರು. ನಾವಿಬ್ರೂ ಹುಚ್ಚರೇ. “ಖಂಡಿತ ಮಾಡ್ಬಹುದು. ಯಾಕೆ ಮಾಡಕ್ಕಾಗಲ್ಲ? ಲೆಟ್ ಅಸ್ ಡು ಅಂಡರ್ ವಾಟರ್ ಶೂಟ್” ಅಂದೆ. ಸೀರೀಸ್ ಆಫ್ ಕ್ವಷ್ಚನ್ ಅಲ್ಲಿ ಹೇಳಿದ್ನ ಹಾಗೇ ಹೇಳ್ತಿದ್ದೀನಿ. “ಎಷ್ಟೊತ್ತಿಗೆ?” ಅಂದ. ನಾನು “ನಾಲಕ್ಕು ಗಂಟೆಗೆ”ಅಂದೆ, ನಾವು ಬೆಳಗ್ಗೆ ಏಳು ಗಂಟೆಗೆ ಮಾತಾಡ್ತಾ ಇದ್ದೀವಿ. ಸೇಮ್ ಡೇ ಸಾಯಂಕಾಲ ನಾಲ್ಕು ಗಂಟೆಗೆ ಅಂಡರ್ ವಾಟರ್ ಶೂಟ್. “ಹೌದಾ ಎಷ್ಟಾಗ್ಬಹುದು?” ಅಂದ್ರು ಶಂಕರ್, ನಾನು ನೋಡ್ಬಿಟ್ಟು “ಎರಡು ಸಾವಿರ ಆಗ್ಬಹುದಾಂತ.”ಆ ಕಾಲದಲ್ಲೇ ಅಂಡರ್ವಾಟರ್ ಶೂಟ್ ಮಾಡಕ್ಕೆ ಎಂಟು ಲಕ್ಷ ಖರ್ಚಾಗ್ತಿತ್ತು. ಇಂಡಿಯಾದಲ್ಲಿ ಯಾರೂ ಅಂಡರ್ ವಾಟರ್ ಶೂಟ್ ಮಾಡಿರ್ಲಿಲ್ಲ. ವಿ ಆರ್ ಡಿಸ್ಕಸಿಂಗ್ ದ ಫಸ್ಟ್ ಅಂಡರ್ ವಾಟರ್ ಶೂಟ್ ಇನ್ ಇಂಡಿಯಾ. ಆಮೇಲೆ “ಭದ್ರಿ ಬಾ ಇಲ್ಲಿ”ಅಂದ್ರು. ಅದೂ ಹೇಳೋ ಸ್ಟೈಲ್ ನೋಡಿ, “ಜಾನ್ ಅಂಡರ್ ವಾಟರ್ ಶೂಟ್ ಮಾಡ್ತಾನಂತೆ. 2000 ರೂ ಕೊಡೋ.”ನಾನು ಹೇಳಿಲ್ಲ, ಇವ್ರು ಹೇಳಿದಕ್ಕೆ ನಾನು “ಹೂ”ಅಂತ ಹೇಳಿದ್ದೆ ಅಷ್ಟೇ. ಭದ್ರಿ “ಏನೋ ಎರಡು ಸಾವಿರ ರೂಪಾಯಿ ಕೇಳ್ತಿದ್ಯ ನೀನು?” ಅಂದ. ನಾನು “ಏಯ್, ಎಂಟು ಲಕ್ಷ ರೂಪಾಯಿ ಆಗುತ್ತೆ. ಅಲ್ಲೇ ಮಾಡಿಸ್ಕೊ ಹೋಗು” ಅಂದೆ. ಹಾಗೆ 2000 ರೂಪಾಯಿ ಕೊಟ್ರು.


ನನ್ನ ಡಕೋಟ ವ್ಯಾನ್ ಇತ್ತಲ್ಲ ಅದ್ರಲ್ಲಿ ನಾನು ಶಿವಮುಗ್ಗಕ್ಕೆ ಹೊಗ್ತಾ ಇದ್ದೀನಿ, ಆರ್ಕಿಮಿಡೀಸ್ ಪ್ರಿನ್ಸಿಪಲ್ ಆಂಡ್ ಡಿಸ್ಪ್ಲೇಸ್ಮೆಂಟ್ ಆಫ್ ವಾಟರ್ ನ ಸ್ಟಡಿ ಮಾಡ್ತಾ ಇದ್ದೀನಿ. ಥಿಂಕಿಂಗ್, ಹೌ ವಾಟರ್ ಈಸ್ ಡಿಸ್ಪ್ಲೇಸ್ ಅಂತ. ಶಿವಮುಗ್ಗಕ್ಕೆ ಹೊಗಿ ಒಂದು ಮೆಟಲ್ ಶೀಟ್ ತಗೊಂಡೆ, 4ಅಡಿ*4ಅಡಿ*2ಅಡಿ ಶೀಟ್ ತಗೊಂಡು, ಟ್ಯಾಂಕ್ ತರ ವೆಲ್ಡ್ ಮಾಡಿ ಅದಕ್ಕೆ ಒಂದು ಗ್ಲಾಸ್ ಫಿಕ್ಸ್ ಮಾಡ್ದೆ. ಅದನ್ನ ರಡಿ ಮಾಡ್ಕೊಂಡು, ಒಂದೂವರೆ ಗಂಟೆಗೆ ರಿಟರ್ನ್ ಹೋಗ್ಬಿಟ್ಟಿದ್ದೀನಿ. ಎರಡು ಗಂಟೆಗೆ ಶಂಕರ್ ಗೆ ಹೇಳ್ದೆ, “ಶಂಕರ್ ನೋಡು ಬಂದಿದ್ದೀನಿ”ಅಂತ. ನಮ್ಮ ಹುಡುಗ್ರಿಗೆ ಹೇಳ್ದೆ “ನನಗೆ ನೂರು ಬ್ಯಾಗ್ ಕಲ್ಲು ತುಂಬ್ಸಿಡಿ”ಅಂತ. ನಾನು ಡಿಸೈನ್ ಮಾಡಿರುವ ಟ್ಯಾಂಕ್ ಗೆ ದೊಡ್ಡ ದೊಡ್ಡ ಮರಗಳನ್ನ ಹಾಕಿ, ಗೋಣಿ ಚೀಲದಲ್ಲಿ ಕಲ್ಲೆಲ್ಲ ಹಾಕಿದ್ರೆ, ಇದು ಹಾಳಾದದ್ದು ಮುಳುಗ್ತನೇ ಇಲ್ಲ. ಸೋ ಇಟ್ ಆಲ್ ಬಿಕಮ್ ಅ ಬುಲ್‌ಶಿಟ್, ಆರ್ಕಿಮಿಡೀಸ್ ಪ್ರಿನ್ಸಿಪಲ್ ಆಂಡ್ ಡಿಸ್ಪ್ಲೇಸ್ಮೆಂಟ್ ಆಫ್ ವಾಟರ್ ಪ್ರಿನ್ಸಿಪಲ್ ಯಾವುದೂ ವರ್ಕ್ ಆಗ್ಲಿಲ್ಲ.


ಆ ಮೇಲೆ ಎಂಟಾಯರ್ ಟೀಮ್ ಎಲ್ಲರೂ ಬಂದು, ಅದರ ಮೇಲೆ ನಿಂತ್ಕೊಂಡ್ರು. ಆಗ ನೀರೊಳಗೆ ಕಿಟಕಿ ಹೋಯ್ತು. ಆಗ ಶಂಕರ್ “ರಾಮು ಬನ್ನಿ ಶೂಟ್ ಮಾಡೋಣ” ಅಂದ್ರು. ರಾಮು ಬಂದು “ಏನೋ ಜಾನ್ ನನ್ನ ಮರ್ಡರ್ ಮಾಡ್ತೀಯಾ?” ಇದರ ಒಳಗಡೆ ಹಾಕ್ಬಿಟ್ಟು, ಸಮಾಧಿ ಮಾಡ್ತಿದ್ಯಾ ಇದ್ರಲ್ಲಿ?” ಅಂತ. ಆಗ ಶಂಕರ್ “ಡೋಂಟ್ ವರಿ ರಾಮು, ನಾನೇ ಮಾಡ್ತೀನಿ ಶೂಟಿಂಗ್”ಅಂದ್ರು. ಆಗ ರಾಮು “ಇಲ್ಲ ನಾನು ಮಾಡ್ತೀನಿ” ಅಂತ ಹೀ ವೆಂಟ್ ಇನ್ಸೈಡ್ ದಟ್ ಟ್ಯಾಂಕ್. ರಾಮಚಂದ್ರ ಗ್ರೇಟ್ ಕ್ಯಾಮರಾಮ್ಯಾನ್ ವೆಂಟ್ ಇನ್ಸೈಡ್ ದಟ್. ಅನಂತ್ ನಾಗ್ ಎಪಿಸೋಡ್’‘ರೋಮನ್ ಇಮೇಜ್ʼ. ಅನಂತ್ ನಾಗ್ ಡೈವ್ ಮಾಡಿ ನೀರಲ್ಲಿ ರೋಮನ್ ಇಮೇಜ್ ಸಿಗುತ್ತೆ. ಒಳಗೆ ಹೋಗಿ ಸಿಗ್ನಲ್ ಮಾಡಿದ ತಕ್ಷಣ ಅನಂತ್ ನಾಗ್ ಸ್ವಿಮ್ ಮಾಡ್ಕೊಂಡು ವಿಂಡೋ ಮುಂದೆ ಪಾಸ್ ಆಗ್ತಾರೆ. ದ ಗ್ರೇಟ್ ಶಾಟ್, ವಂಡರ್ ಫುಲ್ ಶಾಟ್ ಅಂತ ಹೇಳಿದ ತಕ್ಷಣ. “ಥ್ಯಾಂಕ್ಸ್” ಅಂತ ಹೇಳ್ಬಾರ್ದಾ? ಶಂಕರ್ ನಾಗ್ “ಜಾನ್ ಸ್ವಲ್ಪ ಸೀನ್ ಚೇಂಜ್ ಮಾಡ್ತೀರ?” ಅಂದ್ರು. ನೌ ಹೀ ವಾಂಟ್ಸ್ ಡಿಫ್ರೆಂಟ್ ಶಾಟ್ ಇನ್ ಅಂಡರ್ ವಾಟರ್. ನಾನು “ಇಲ್ಲ ಮಾಡಕ್ಕಾಗಲ್ಲ”ಅಂತ ಹೇಳಲ್ಲ, ಹೀ ಗಿವ್ಸ್ ಮೀ ಛಾಲೆಂಜ್, ಆಂಡ್ ಐ ಟೇಕ್ ದಟ್ ಛಾಲೆಂಜ್, ಆಂಡ್ ಡೂ ಇಟ್. ಏನ್ಮಾಡಿದ್ವಿ? ಬಹಳ ಈಸಿ, ಒಂದು ಕಲ್ಲು ತಗೊಂಡು ಹೋಗಿ ಅದೇ ನೀರಲ್ಲಿ ಇಟ್ವಿ. ಹಿ ಕಮ್ಸ್ ಅಗೇನ್ ಸ್ವಿಮ್ಮಿಂಗ್. ನೆಕ್ಸ್ಟ್ ಏನ್ಮಾಡಿದ್ವಿ? ಕಲ್ಲು ಹಿಂದೆ, ಮುಂದೆ ಅನಂತ್ ನಾಗ್. ಮತ್ತೆ ಕಲ್ಲು ತೆಗೆದು ಹಾಕಿ, ಇನ್ನೊಂದು ಮರ ಹಾಕಿ ನೀರಲ್ಲಿ ತಿರ್ಗ ಅನಂತ್ ಈಸ್ ಕಮಿಂಗ್.


ಹೀ ಸ್ವಿಮ್ಮಿಂಗ್ ಮೈಲ್ಸ್ ಆಂಡ್ ಮೈಲ್ಸ್. ಆ ಮೇಲೆ ಒಂದು ಟವಲ್ ತಗೊಂಡು ಮೀನು ಹಿಡ್ಕೊಂಡೆ. ಕ್ಯಾಮರಾ ಆನ್ ಮಾಡ್ಕೊಂಡು ಅದರ ಮುಂದೆ ಮೀನು ರಿಲೀಸ್ ಮಾಡೋದು. ಕ್ಯಾಮರಾ ಮುಂದೆ ಮೀನೆಲ್ಲಾ ಬರುತ್ತೆ. ಯು ಕ್ಯಾನ್ ಸಿ ಇನ್ ದ ಎಪಿಸೋಡ್. ಇಷ್ಟೆಲ್ಲಾ ಅದ್ರಲ್ಲಿ ಮಾಡಿದ್ವಿ. ಗೊತ್ತಿಲ್ಲ ಏನೇನು ಮಾಡ್ದೆ? ಅಂತ,


ಥ್ರೀ ಮಂಥ್ಸ್ ಆದ್ಮೇಲೆ ಐ ವಾಸ್ ಇನ್ವಾಯ್ಟಡ್ ಬೈ ದ ಪೂನಾ ಫಿಲ್ಮ್ ಇನ್ಸ್ಟಿಟ್ಯೂಟ್. ಟು ಪ್ರಸಂಟ್ ಅ ಪೇಪರ್ ಆನ್, ಹೌ ಟು ಡೂ ಅಂಡರ್ ವಾಟರ್ ಶೂಟಿಂಗ್. ನಾನ್ಹೇಗೆ ಹೇಳ್ಳಿ ಒಂದು ಬಾಥ್ ರೂಮ್ ತರ ಟ್ಯಾಂಕ್ ಕಟ್ಬಿಡಿ, ಅದ್ರೊಳಗೆ ಒಂದು ಕಿಟಕಿ ಇಟ್ಬಿಡಿ, ಸೋ ಐಡಿಯಾ ಏನಂದ್ರೆ ಪರಮೇಶ್, ಲೆಸ್ ಈಸ್ ಮೋರ್. ಇಟ್ಸ್ ನಾಟ್ ಅಬೌಟ್ ಸ್ಪೆಂಡಿಂಗ್ ಸೊ ಮಚ್ ಆಫ್ ಮನಿ, ಆನ್ ಡೂಯಿಂಗ್ ಥಿಂಗ್ಸ್, ನನ್ನ ಸಿನಿಮಾದಲ್ಲಿ ಆ ಮೇಲೆ ಬಳಸ್ಕೊಂಡೆ. ಐ ಡಿಡ್ ಹೋಲ್ ಆಫ್ ಬೆಂಗಳೂರು ಅಂಡರ್ ವಾಟರ್ ಇನ್ ಅ ಸಿನಿಮಾ.


ಆಮೇಲೆ ಸಿಕ್ಸ್ ಮಂಥ್ ಲೇಟರ್ ಐ ವಾಸ್ ಇನ್ವಾಯಿಟಡ್ ಟು, ಆಮ್ಸಟಡಾಮ್ ಫಾರ್ ಬೆಸ್ಟ್ ಆರ್ಟ್ ಡೈರೆಕ್ಟರ್ ಫಾರ್ ದಟ್ ಎಪಿಸೋಡ್. ರೋಮನ್ ಇಮೇಜ್ ಅಲ್ಲಿ. ನನ್ನ ಹಿಂದೆ ಅಮಿತಾಬಚ್ಚನ್ ಅವ್ರಿಗೆ ಅವಾರ್ಡ್. ನಾನು ಹೇಳ್ದೆ “ಅರೆ ಬಯ್ಯ ಆಪ್ ಆಯಿಯೆ, ಮೆ ಬಾದ್ ಮೆ ಆತಾ ಹೂ.” ಅಂತ. ಇಟ್ ಈಸ್ ಅ ಬ್ಯೂಟಿಫುಲ್ ಐಡಿಯಾ. ಐ ರಿಯಲೈಸ್ಡ್, ಇಫ್ ಐ ಸೆಡ್ ನೋ ”ಶಂಕರ್ ಹೆಂಗಾಗುತ್ತೆ? ಆರ್ ಯು ಕ್ರೇಸಿ? ಹೆಂಗೆ ಮಾಡಕ್ಕಾಗುತ್ತೆ?” ಅಂತ ಹೇಳಿದ್ರೆ ಯು ನೆವರ್ ವುಡ್ ಹಾವ್ ಮೇಡ್ ಇಟ್.ಮುಂದುವರೆಯುವುದು…

26 views