ಇಂದಿರಾಗಾಂಧಿಯವರ ಕ್ಯಾಬಿನ್‌ ಅಲ್ಲೂ ಶೂಟ್‌ಮಾಡಿದ್ದೇವೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 132


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ದೇವೆಗೌಡ ಅವರ ಸಾಕ್ಷಚಿತ್ರ ಮಾಡುವ ಸಮಯದಲ್ಲಿ ಏಳು ದಿವಸ ದೆಹಲಿಯಲ್ಲಿ ಅವರ ಜೊತೆಗಿದ್ದೆವು. ಬಿಹಾರ್‌ ಹೌಸ್‌, ಮತ್ತು ಕರ್ನಾಟಕ ಭವನದಲ್ಲಿ ಶೂಟ್ ಮಾಡಿದೆವು. ಗಣರಾಜ್ಯೋತ್ಸವದ ದಿನವದು. ಪರೇಡ್‌ ನಡೆಯುತ್ತಿತ್ತು. ಪ್ರಧಾನಿ ಅವರ ಡಯಾಸ್‌ ಪಕ್ಕದಲ್ಲಿ ಕ್ಯಾಮೆರಾ ಇಡಲು ಗೌರಿಶಂಕರ್‌, ನನಗೆ ಮತ್ತು ಇನ್ನೊಬ್ಬ ಸಹಾಯಕ ಕ್ಯಾಮೆರಾಮೆನ್‌ಗೆ ಪರ್ಮಿಷನ್‌ ಕೊಟ್ಟಿದ್ದರು.


ಪ್ರಧಾನಿ ಅವರ ಕಚೇರಿ, ಅವರು ಹೇಗೆ ಕೆಲಸ ಮಾಡುತ್ತಾರೆ, ಇಂದಿರಾಗಾಂಧಿ ಅವರ ಕೋಣೆ ಹೇಗಿತ್ತು ಎಂಬುದನ್ನೆಲ್ಲ ಶೂಟ್‌ ಮಾಡಿದ್ದೇವೆ. ಇಂದಿರಾಗಾಂಧಿಯ ಕೋಣೆ ಬಾಗಿಲನ್ನು ತೆರೆಯುವುದೇ ಇಲ್ಲವಂತೆ ನಮಗಾಗಿ ಅದನ್ನು ತೆರೆದಿದ್ದರು. ದೇವೇಗೌಡರ ಮನೆ ಎಲ್ಲವನ್ನೂ ತೋರಿಸಿದ್ದೇನೆ. ಅದನ್ನು ರೇವಣ್ಣ ಅವರಿಗೆ ಕೊಟ್ಟಿದ್ದೇನೆ. ಎಲ್ಲರೂ ನೋಡಿದ್ದಾರೆ ತುಂಬಾ ಚೆನ್ನಾಗಿದೆ ಎಂದು ಹೇಳಿದರು ಎಂದು ಅವರು ತಿಳಿಸಿದ್ದರು. ಆ ಕುಟುಂಬದ ಜೊತೆಗೂ ನನಗೆ ಒಳ್ಳೆಯ ಸಂಬಂಧವಿದೆ. ಅವರೆಲ್ಲ ನನ್ನನ್ನು ಗೌರವದಿಂದ ನೋಡುತ್ತಾರೆ.ಮುಂದುವರೆಯುವುದು...

22 views