
ಈಗ ಸಿನಿಮಾ ಮಾಡುವ ಶೈಲಿ ಬದಲಾಗಿದೆ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 124
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಆಡುವ ಗೊಂಬೆ ಎಂಬ ಸಿನಿಮಾವನ್ನು ಕಳೆದ ವರ್ಷ ಮಾಡಿದೆ. ಶಿವಣ್ಣ, ಪುನೀತ್, ರಾಘವೇಂದ್ರ ರಾಜ್ಕುಮಾರ್, ವಿಜಯರಾಘವೇಂದ್ರ ಅವರು ಆ ಸಿನಿಮಾದಲ್ಲಿ ಹಾಡಿದ್ದಾರೆ. ರಾಜ್ಕುಮಾರ್ ಕುಟುಂಬ ಎಂದರೆ, ನನ್ನ ಕುಟುಂಬವೇ ಇದ್ದ ಹಾಗೆ. ಸಿನಿಮಾದ ಹಾಡು, ಕಥೆ ಎಲ್ಲ ಚೆನ್ನಾಗಿತ್ತು. ಆದರೆ, ಕೇವಲ ಸಿನಿಮಾ ಮೂರು ವಾರವಷ್ಟೇ ಸಿನಿಮಾ ಓಡಿತು. ಸಿನಿಮಾ ಮಾಡುವ ನಮ್ಮ ಶೈಲಿ ಈಗಿನವರಿಗೆ ಹಿಡಿಸಲಿಲ್ಲ ಅನಿಸುತ್ತದೆ. ನನ್ನ ಯಾವುದೇ ಸಿನಿಮಾಗಳು 100 ದಿನಗಳಿಗಿಂತ ಕಡಿಮೆ ಓಡಿಲ್ಲ. ಇದೊಂದೇ 3 ವಾರ ಓಡಿದ ಸಿನಿಮಾ. ಆದರೆ, ಈಗಿನ ಕಾಲಕ್ಕೆ ಮೂರು ವಾರ ಥಿಯೇಟರ್ನಲ್ಲಿದ್ರು ದುಡ್ಡು ಬಂದು ಬಿಡುತ್ತದೆ.
ಮುಂದುವರಿಯುವುದು...