ಈ ದಣಿವರಿಯದ ಮನುಷ್ಯ ತನ್ನ ವ್ಯಾನ್‌ ಅನ್ನೇ ಆಫೀಸಾಗಿ ಮಾರ್ಪಡಿಸಿಕೊಂಡಿದ್ರಂತೆ


ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 19

(ಮಾಲ್ಗುಡಿ ಡೇಸ್ ಕುರಿತಂತೆ “ಶಂಕರ್ ನಾಗ್ ಗೆಳೆಯ ರಮಶ್ ಭಟ್ ಅವರ ನೆನಪುಗಳು”)ಪರಮ್: ಅಷ್ಟು ದಣಿವು ಕಾಣಿಸ್ತನೇ ಇರ್ಲಿಲ್ವ ಆ ಮನುಷ್ಯನಲ್ಲಿ?


ರಮೇಶ್ ಭಟ್: ದಣಿವೇ ಇಲ್ಲ. ಯಾವಾಗ್ಲೂ ವರ್ಕ್ ಅಷ್ಟೇ. ಆ ಮನುಷ್ಯನ ಸ್ಪೀಡು ಅಂದ್ರೆ, ಯಾರಾದ್ರು ಕಾರನ್ನ ರಿವರ್ಸ್ ತೆಗಿವಾಗ 50-60 ಕಿ.ಮೀ ಸ್ಪೀಡಲ್ಲಿ ತೆಗಿಯಕ್ಕಾಗುತ್ತ? ಅವ್ರು ತಗಿತಿದ್ರು. ಈಗ ಯಾರಾದ್ರು ಕಾರು ಓಡಿಸ್ತಿದ್ರೆ ಅದೂ ನಮ್ಮ ಈ ರೋಡ್ಗಳಲ್ಲಿ ಓದಕ್ಕಾಗುತ್ತ? ಅವ್ರು ಓದ್ತಾರೆ. ಟೈಪ್ ಮಾಡಕ್ಕಾಗುತ್ತಾ? ಅವ್ರದ್ದು ವ್ಯಾನ್ ಒಂದಿತ್ತು. ಅದರೊಳಗೆ ಆಫೀಸ್ ಸೆಟಪ್ಪೇ ಇತ್ತು. ಯಾಕಂದ್ರೆ, ಅವ್ರದ್ದು ಸಿಂಗ್ಸಂದ್ರ ಮನೆ ಹೊಸೂರು ರೋಡಲ್ಲಿ. ಇಲ್ಲಿಂದ ಹದಿನೆಂಟು ಇಪ್ಪತ್ತು ಕಿಲೋಮೀಟರ್ ಆಗ್ಬಹುದು. ಅಲ್ಲಿಂದ ಬರೋದ್ರೊಳಗೆ ಅವ್ರ ಆಫೀಸ್ ಕೆಲ್ಸ ಅಥವಾ, ಯಾವುದಾದ್ರು ಸೀನ್ ದು ಡೈಲಾಗ್, ಏನಾದ್ರೂ ಮಾಡ್ತಿದ್ರು. ಇಲ್ಲ ಅಂದ್ರೆ ಅವ್ರು ರಫ್ ಆಗಿ ಟೈಪ್ ಮಾಡ್ಕೊಂಡು ತರ್ತಿದ್ರು. ಅದೆಲ್ಲಾ ಲೊಕೇಶನ್ ಗೆ ಬರೋದ್ರೊಳಗೆ ಆಗಿ ಹೋಗೊದು ಟ್ರಾವಲಿಂಗಲ್ಲೇ. ಟ್ರಾವಲಲ್ಲೂ ಯೋಚ್ನೆ ಮಾಡೊದೇನು ಇಲ್ಲ. ಟೈಪ್ ಮಾಡ್ತನೇ ಇರ್ತಿದ್ರು. ಸೋ ಇದು ಅವ್ರ ಸ್ಪೀಡ್. ಅಂಥವ್ರು ಏನೋ ನನ್ನ ಮೇಲೆ ನಂಬಿಕೆ, ನಿಶ್ವಾಸ ಎಲ್ಲಾ ಇಟ್ಕೊಂಡಿದ್ರು. ನಾನು ಮತ್ತೆ ಆ ತರ ಮನುಷ್ಯನ ನೋಡ್ತೀನಿ ಅಂತ ಅನ್ಸಲ್ಲ.ಮುಂದುವರೆಯುವುದು…

10 views