ಈ ಪ್ರಾಜೆಕ್ಟ್ ಗೆ ಬ್ಯಾಂಕ್‌ ನಿಂದ ಫೈನಾನ್ಸ್‌ ತಗೊಂಡಿದ್ವಿ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 99

( ಶಂಕರ್‌ನಾಗ್‌ ಕುರಿತಂತೆ ಮಾಲ್ಗುಡಿ ಡೇಸ್‌ ನಿರ್ಮಾಪಕರ ನೆನಪುಗಳು)ಪರಮ್: ಪ್ರೊಡ್ಯೂಸರ್ ಆಗಿ ಎಲ್ಲಿ ಕಾಸ್ಟ್ ಕಟ್ಟಿಂಗ್ ಮಾಡ್ಬಹುದು ಅಂತ ಯೋಚ್ನೆ ಮಾಡ್ತಿರ್ತಾರೆ, ಆದ್ರೆ ನೀವು ಒಂದು ಸ್ಮಾಲ್ ಟಿ.ವಿ ಸೀರಿಯಲ್ ಗೆ 35 ಎಮ್.ಎಮ್. ಅಂದಾಗ ಅಷ್ಟು ಖರ್ಚು ಮಾಡ್ಬೇಕಾಂತ ಯಾಕೆ ಯೋಚ್ನೆ ಮಾಡ್ಲಿಲ್ಲ?


ಬದರಿನಾಥ್: ನಾವು ಯೋಚ್ನೆ ಮಾಡಿದ್ವಿ, ಆದ್ರೆ ಡಿಸೀಷನ್ ವಾಸ್ ಟೇಕನ್ ಬೈ ಶಂಕರ್, ದೂರದರ್ಶನ್ ಹೈ ಬ್ಯಾಂಡಲ್ಲಿ ಮಾಡ್ಬಹುದಿತ್ತು. 10 ರೂಪಾಯಿ ಹಾಕಿದ್ರೆ ಒಂದು ರೂಪಾಯಲ್ಲಿ ಮುಗ್ದೋಗ್ತಿತ್ತು. ಅವ್ರ ಥಿಂಕಿಂಗ್ ಹೇಗಿತ್ತು ಅಂದ್ರೆ, ದಿಸ್ ವಾಸ್ ನಾಟ್ ಶೂಟ್ ಫಾರ್ ಟುಡೆ. ಅಷ್ಟು ಗುಡ್ ಕ್ವಾಲಿಟಿ ಹೈ ಬ್ಯಾಂಡಲ್ಲಿ ಸಿಗಲ್ಲ. ಒನ್ಲೀ ವೇ 35 ಎಮ್.ಎಮ್. ಆದ್ರೆ ಕಾಸ್ಟ್ ತುಂಬಾ ಜಾಸ್ತಿಯಾಗುತ್ತೆ. ಸ್ಪಾನ್ಸರ್ಸ್ ಕೊಡ್ತಾ ಇದ್ದ ಅಮೌಂಟಲ್ಲಿ ಒಂದು ಎಪಿಸೋಡ್ ಮುಗ್ಸೋದೇ ಕಷ್ಟ. ಮುಗ್ಸಿ ಕಾಸು ಇಟ್ಕೊಳೋದಂತೂ ಸಾಧ್ಯನೇ ಇಲ್ಲ.


ಆ ಟೈಮಲ್ಲಿ ನಮಿಗೆ ಬಹಳ ಸಹಾಯ ಮಾಡಿದ್ದು ‘ಕರ್ನಾಟಕ ಬ್ಯಾಂಕ್’. ಚೇರ್ ಮ್ಯಾನ್ ಇಂದ ಹಿಡ್ದು ಎಲ್ಲರೂ ಸಪೋರ್ಟಿವ್ ಆಗಿ ಇದ್ರು. ಇವತ್ತಿಗೆ 45 ವರ್ಷದಿಂದ ನಾವು ಟ್ರಾನ್ಸಾಕ್ಷನ್ ಮಾಡ್ತಾ ಇದ್ದೀವಿ. ಆಂಡ್ ಆಗಿನ ಕಾಲದಲ್ಲಿ ಫಿಲ್ಮ್ ಫೈನಾನ್ಸಿಂಗ್ ಫ್ರಮ್ ಅ ಬ್ಯಾಂಕ್ ಈಸ್ ಇಂಪಾಸಿಬಲ್. ನಮ್ಮ ಪರಿಸ್ಥಿತಿ ಹೇಗಿತ್ತು ಅಂದ್ರೆ, ಸ್ಪಾನ್ಸರ್ ನಮಿಗೆ ಒಂದು ಲಕ್ಷ ರೂಪಾಯಿ ಕೊಟ್ರೆ ನಮಿಗೆ ಡಬಲ್ ವರ್ಷನ್ ಇದ್ದಿದ್ರಿಂದ ಖರ್ಚಾಗ್ತಾ ಇದ್ದದ್ದು ಮೂರು ಲಕ್ಷ. ದೇರ್ ಕಮ್ಸ್ ಅಪ್ಪಂದು ಆಟಿಟ್ಯೂಡ್, “ಐ ವಿಲ್ ಟೇಕ್ ದಿಸ್ ಇಂಟರ್ ನ್ಯಾಷನಲ್” ಅಂತ ಹೇಳಿದ್ರು. ಅವ್ರು ಇಷ್ಟೇ ಕೊಡೊದಾ? ರೆಡಿ ಮಾಡಿ ಇದನ್ನ ಆಚೆಕಡೆ ತಗೊಂಡು ಹೋಗಿ ಸೇಲ್ ಮಾಡ್ತೀನಿ ಅಂದ್ರು. ಶಂಕರ್ ಮೇಲೆ ಅಷ್ಟು ಕಾನ್ಫಿಡೆನ್ಸ್ ಇತ್ತು ಅವ್ರಿಗೆ.
ಮುಂದುವರೆಯುವುದು…

14 views