ಉದಯಶಂಕರ್‌ ಅವರ ಕ್ಯಾಸೆಟ್ ಕಲೆಕ್ಷನ್‌ ಹುಚ್ಚು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 87


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಉದಯಶಂಕರ್‌ ಗೆ ಯಾರಾದ್ರೂ ಸಾವಿರ ರೂಪಾಯಿ ಕೊಟ್ಟರೂ, ಆನಂದ್‌ರಾವ್‌ ಸರ್ಕಲ್‌ನಲ್ಲಿ ಪೂರ್ಣಿಮಾ ಸ್ಟೋರ್‌ಗೆ ಹೋಗಿ ಕ್ಯಾಸೆಟ್‌ ತೆಗೆದುಕೊಳ್ಳುತ್ತಿದ್ದ. ಅವನ ಮನೆಯಲ್ಲಿ 6 ಸಾವಿರದಿಂದ 7 ಸಾವಿರ ಕ್ಯಾಸೆಟ್‌ ಇದೆ. ಅವುಗಳನ್ನೆಲ್ಲ ಅವನ ತಮ್ಮ ಜೋಪಾನವಾಗಿ ಇಟ್ಟಿದ್ದಾನೆ. ಸಂಗೀತದ ಬಗ್ಗೆ ಅಷ್ಟೊಂದು ಹುಚ್ಚಿತ್ತು. ರಾತ್ರಿ ಹೊತ್ತು ಸಂಗೀತವನ್ನು ಆಸ್ವಾದಿಸುತ್ತಿದ್ದ.


ಉದಯ್‌ಶಂಕರ್‌ ಬರಹಗಾರ. ಆದರೆ, ಅವನಿಗೆ ಸಂಗೀತದ ಮೇಲೆ ಅತ್ಯಂತ ಪ್ರೀತಿ. ಜಸ್‌ರಾಜ್‌, ಭೀಮಸೇನ್‌, ಅಲ್ಲಾ ರಖಾ... ಹೀಗೆ ಅನೇಕ ಸಂಗೀತ ಮಾಂತ್ರಿಕರ ಕ್ಯಾಸೆಟ್‌ಗಳನ್ನು ಕೊಂಡು ಕೇಳುವ ಅಭ್ಯಾಸ ಅವನಿಗಿತ್ತು.


ಮುಂದುವರೆಯುವುದು...

11 views