ಉದಯಶಂಕರ್‌ ತಮಗಾಗಿಯೇ ಬರೆದುಕೊಂಡ ಹಾಡು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 89


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಉದಯ್‌ಶಂಕರ್‌ ಕುಟುಂಬದಲ್ಲಿ ನಾನು ಒಬ್ಬನಾಗಿದ್ದೆ. ಉದಯ್‌ಶಂಕರ್‌ ತೀರಿ ಹೋದಾಗ ಮಲ್ಲೇಶ್ವರದ ಮನೆ ಮುಂದೆ ದೇಹ ಇಟ್ಟಿದ್ದರು. ಅಲ್ಲೊಬ್ಬ ವ್ಯಕ್ತಿ ಟೇಪ್‌ರೆಕಾರ್ಡರ್‌ ಇಟ್ಟುಕೊಂಡು ‘ಆಡಿಸಿನೋಡು ಬೀಳಿಸಿ ನೋಡು’ ಹಾಡು ಹಾಡಿದ. ಉದಯ್‌ಶಂಕರ್‌ ಅವರಿಗಾಗಿಯೇ ಈ ಹಾಡನ್ನು ಬರೆದುಕೊಂಡಿದ್ದಾರೆ ಸರ್‌. ಅವರ ಹಾಡನ್ನು ಅವರಿಗೆ ಕೊನೆ ಸಲ ಕೇಳಿಸಿಬಿಡೋಣ ಎಂದ. ಅವನ ಕಣ್ಣಲ್ಲಿ ನೀರು ಬರುತ್ತಿತ್ತು. ನಮಗೂ ಅದು ಭಾವನಾತ್ಮಕವಾದ, ಹೃದಯವನ್ನು ಮುಟ್ಟಿದಂತಹ ಸನ್ನಿವೇಶವಾಗಿತ್ತು.


ವರದಪ್ಪ ಹೋದಾಗ ರಾಜ್‌ಕುಮಾರ್‌ ಅವರು ಎಷ್ಟು ಕಣ್ಣೀರು ಹಾಕಿದ್ರೋ ಅಷ್ಟೇ ಕಣ್ಣೀರನ್ನು ಉದಯ್‌ಶಂಕರ್‌ ಹೋದಾಗಲೂ ಹಾಕಿದ್ರು. ಪಾರ್ವತಮ್ಮ ಅವರಿಗೆ ಉದಯ್‌ಶಂಕರ್‌ ಅವರ ತಾಯಿ ಎಂದ್ರೆ ಬಹಳ ಪ್ರೀತಿ. ಅವರ ಮನೆಗೆ ಹೋಗಿ ಊಟ ಮಾಡುವುದೆಂದರೆ ಅವರಿಗೆ ತೃಪ್ತಿ. ಮದ್ರಾಸ್‌ನಲ್ಲಿದ್ದಾಗ ಕಚೇರಿಯಿಂದ ಮನೆಗೆ ಹೋಗುವ ವೇಳೆ ಅವರ ಕುಟುಂಬದವರೊಂದಿಗೆ ಮಾತನಾಡಿ, ತಂಗಿ ಮಗುವನ್ನು ಆಟವಾಡಿಸಿಕೊಂಡು ಹೋಗುತ್ತಿದ್ರು.ಮುಂದುವರೆಯುವುದು...

24 views