ಉದಯ್‌ಶಂಕರ್‌ ಅವರ ಹರಿಕಥೆ ಮತ್ತು ಅಣ್ಣಾವ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 84


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಅವರಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಉದಯ್‌ಶಂಕರ್‌. ಉದಯ್‌ಶಂಕರ್‌ ಮಾತು ಅಮೋಘ, ಅದ್ಭುತ. ಕಿವಿಗೆ ಅಮೃತ. ಅವನು ಯಾವುದೇ ಹರಿಕಥೆ ದಾಸರಿಗೂ ಕಡಿಮೆ ಇಲ್ಲದಂತೆ ರಾಮಾಯಣ ಹೇಳುತ್ತಿದ್ದ. ಅದು ಅವನದೇ ಶೈಲಿಯಲ್ಲಿ. ಅವನು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಗಳು ರಾಜ್‌ಕುಮಾರ್‌ ಅವರಿಗೆ ಬಹಳ ಅಚ್ಚುಮೆಚ್ಚು. ಸರಳವಾಗಿ ಹೇಳುತ್ತಿದ್ದ ಅವನ ರೀತಿ ಕೇಳಲು ಅಪ್ಯಾಯಮಾನವಾಗಿ ಇರುತ್ತಿತ್ತು.


ಅವನ ಅಕ್ಷರ ಚೆನ್ನಾಗಿರಲಿಲ್ಲ ಎಂದು ಸಹಾಯಕರೊಬ್ಬರನ್ನು ಇಟ್ಟುಕೊಂಡಿದ್ದ. ಅವರು ಬಹಳ ಮುದ್ದಾಗಿ ಬರೆಯುತ್ತಿದ್ದರು. ಅವರ ಹೆಸರು ಶಾಮಣ್ಣ.ಮುಂದುವರೆಯುವುದು...

16 views