ಉಪೇಂದ್ರ ಅವರ ಈ ಗುಣವನ್ನ ಎಲ್ಲರೂ ಕಲಿಯಬೇಕು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 34
ಜನರನ್ನು ಹೇಗೆ ಗಳಿಸುವುದು ಎಂಬುದನ್ನು ಉಪೇಂದ್ರ ಅವರ ಹತ್ತಿರ ಕಲಿಯಬೇಕು. ಅವರಿಗೆ ಜೀವನವೇ ಪಾಠ ಕಲಿಸಿದೆ. ಜೀವನದ ಅನುಭವವಗಳೇ ಅವರ ನಡವಳಿಕೆಗೆ ಕಾರಣ. ಸೃಜನ್‌ ಅವರದೂ ಅದ್ಭುತವಾದ ವ್ಯಕ್ತಿತ್ವ. ಅವರು ಬೆಳೆಯುವ ವೇಳೆ, ಎಲ್ಲರನ್ನೂ ಬೆಳೆಸಲು ಪ್ರಯತ್ನಿಸುತ್ತಾರೆ. ಗುರುಕಿರಣ್‌ ಅವರ ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮಕ್ಕೆ ಈಗಲೂ ನಾನು ಹೋಗುತ್ತೇನೆ. ಎಲ್ಲರಿಗೂ ವೇದಿಕೆ ಮೇಲೆ ಸಮಯ ನಿಗದಿ ಇರುತ್ತೆ. ಆದರೆ, ನನಗೆ ಮಾತ್ರ ಯಾವತ್ತಿಗೂ ಇಷ್ಟೇ ನಿಮಿಷ ಮಾಡಿ ಬನ್ನಿ ಎಂದು ಎಂದಿಗೂ ಹೇಳಿಲ್ಲ. ಸೃಜನ್‌, ಗುರುಕಿರಣ್‌ ಎಲ್ಲ ಇನ್ನು ಯುವಕರು. ಈಗಲೇ ಅವರಿಗೆ ಈ ರೀತಿಯ ಗುಣ ಇದೆ. ಇದು ಕನ್ನಡ ಮಣ್ಣಿನ ಗುಣ.ಮುಂದುವರೆಯುವುದು...

8 views