ಉಪೇಂದ್ರ ಅವರ ಸಕ್ಸ್‌ಸ್ಸಿನ ಒಳಗುಟ್ಟು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 30
ನಿಮಗೊಂದು ನಿಜ ಹೇಳ್ತೇನೆ. ಈ ಮಾತು ಹೇಳಿದ ಮೇಲೆ ಆಚೆ ಹೋದ್ರೆ ಜನ ನನ್ನನ್ನು ಹೊಡೆಯಲುಬಹುದು. ಉಪೇಂದ್ರನಿಗೆ ಏನು ಗೊತ್ತಿಲ್ಲ? ಅದರಿಂದಲೇ ಅವರು ಕಲಿಯುತ್ತಿರುವುದು. ಅವರನ್ನು ಬಹಳ ವರ್ಷಗಳಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ಅವರು ಯಾವ ವಿಷಯ ಹೇಳಿದ್ರೂ ಹೌದಾ, ಗೊತ್ತಿಲ್ಲ ಎಂದೇ ಹೇಳುತ್ತಾರೆ. ಅದರಿಂದಲೇ ಅವರು ಕಲಿಯುತ್ತಿದ್ದಾರೆ.


ಒಬ್ಬ ಮನುಷ್ಯ ತನ್ನಗೆಲ್ಲ ಗೊತ್ತು ಎಂಬ ಭಾವನೆ ಬೆಳೆಸಿಕೊಂಡನೆಂದರೆ ಅವನ ಕಲಿಕೆ ಅಲ್ಲಿಗೆ ನಿಲ್ಲುತ್ತದೆ. ಉಪೇಂದ್ರ ಅವರು ಯಾವಾಗಲೂ ಹೌದಾ, ಗೊತ್ತೇ ಇಲ್ಲ ನೋಡಿ. ನೀವು ಹೇಳಿದ ಮೇಲೆ ಗೊತ್ತಾಯ್ತು ಎಂದು ಹೇಳುವುದನ್ನೆಲ್ಲವನ್ನು ಕೇಳುತ್ತಾರೆ. ಉಪೇಂದ್ರ ಅವರ ಬಳಿ ಹೇಳಿದ ವಿಷಯಗಳನ್ನೆ ಪದೇ ಪದೇ ಹೇಳಿದ್ರೂ ಅವರು ಅದನ್ನು ಕೇಳಿಸಿಕೊಳ್ಳುತ್ತಾರೆ.


ಅವರಿಗೆ ಸಾಹಿತ್ಯ, ಸ್ಕ್ರೀನ್‌ ಪ್ಲೇ, ಸ್ಟೋರಿ, ಹಾಡುಗಳನ್ನು ಬರೆಯುವುದು, ಸಂಯೋಜಿಸುವುದು, ನಿರ್ದೇಶನ, ಮೇಕಪ್‌, ಕ್ಯಾಮೆರಾ, ನಟನೆ... ಹೀಗೆ ಸಿನಿಮಾ ಕ್ಷೇತ್ರಕ್ಕೆ ಏನು ಬೇಕೋ ಅವೆಲ್ಲ ಗೊತ್ತು. ಆದರೂ, ನನಗೇನು ಗೊತ್ತಿಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಅವರು ಬೆಳೆಯುತ್ತಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ ಎಂದು ತಿಳಿದು ನಾನು ಮೂರ್ಖನಾದೆ. ಅವರು ರಾಜಕೀಯದ ಬಗ್ಗೆ ಮಾತಾಡಿದ್ರೆ ಜನ ರೆಕಾರ್ಡ್ ಮಾಡಿ ಕೇಳುತ್ತಾರೆ. ಮನುಷ್ಯ ಹೇಗೆ ಬದುಕಬೇಕು ಎಂಬ ರಾಜಕೀಯ ಅವರಿಗೆ ಗೊತ್ತಿದೆ.ಮುಂದುವರೆಯುವುದು...

19 views