‘ಉಪೇಂದ್ರ ತಮ್ಮ ಮಕ್ಕಳನ್ನು ತುಂಬಾ ಡಿಫರೆಂಟ್‌ ಆಗಿ ಬೆಳೆಸ್ತಿದ್ದಾರೆ’

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 33
ಧೀರನ್‌ ಎಂಬ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಅದರ ನಿರ್ದೇಶಕರು ಉಪೇಂದ್ರ ಅವರು ಒಂದು ಹಾಡು ಹಾಡಬೇಕು. ಅದಕ್ಕೆ ತಕ್ಕಂತಹ ದುಡ್ಡನ್ನು ಕೊಡುತ್ತೇವೆ. ನೀವು ಹೇಳಿದ್ರೆ ಆಗುತ್ತೆ. ಅವರ ಬಳಿ ಹಾಡಿಸಿ ಎಂದು ಕೇಳಿಕೊಂಡರು. ನಾವು ಕೇಳಿದ್ವಿ, ಮೂರು ತಿಂಗಳಿನಿಂದ ಪ್ರಯತ್ನಿಸುತ್ತಲೇ ಇದ್ದೇವೆ. ಅವರ ಪಿಎ ಟೈಮಿಲ್ಲ ಆಗಲ್ಲ ಅಂದ್ರು ಎಂದು ಸಿನಿಮಾ ತಂಡದವರು ಹೇಳಿದ್ರು. ನಾನು ಹೋಗಿ ಕೇಳಿದೆ. ಗುರುವೇ ಫೋನ್‌ ಮಾಡ್ತೇನೆ ಆಮೇಲೆ ಎಂದ್ರು. ನಾನು ಇನ್ನು ಮಾಡುವುದಿಲ್ಲ ಎಂದುಕೊಂಡೆ. ಆದ್ರೆ, ಫೋನ್ ಮಾಡಿದ್ರು. ಎಲ್ಲಿ ಸ್ಟುಡಿಯೊ ಬುಕ್‌ ಮಾಡ್ತೀರಾ ಎಂದ್ರು. ಗುರುಕಿರಣ್‌ ಸ್ಟುಡಿಯೊ ಎಂದೆ. ಒಳ್ಳೆಯದೇ ಆಯ್ತು ಬಿಡಿ ಎಂದ್ರು. ಹಾಡನ್ನು ಹಾಡಿಯೂ ಬಿಟ್ರು. ಉಪೇಂದ್ರ ಮಗಳು ಹಿಂದಿನ ದಿನದಿಂದಲೂ ಅಲ್ಲಿದ್ದಳು. ರೆಕಾರ್ಡಿಂಗ್ ಇದೆ ಎಂದು ಬಂದಳಾ ಎಂದು ಕೇಳಿದೆ. ಇಲ್ಲ ಇದು ಗುರುಕಿರಣ್‌ ಅವರ ಸಂಗೀತದ ಮನೆ. ಇಲ್ಲಿ ಬರುತ್ತಿದ್ದರೆ, ಸಂಗೀತದ ಬಗ್ಗೆ ಆಸಕ್ತಿ ಬರುತ್ತದೆ ಎಂದು ಎಂದ್ರು. ಇಲ್ಲಿ ಸಂಗೀತ ಕಲಿಯುತ್ತಾಳಾ ಎಂದೆ. ಇಂಥ ವಾತಾವರಣದಲ್ಲಿ ಇದ್ರೆ ಸಾಕು ಕಲಿಯುತ್ತಾಳೆ. ಕಲಿಸುವ ಅಗತ್ಯವಿಲ್ಲ ಎಂದ್ರು. ಅವರೇ ಗುರುಕಿರಣ್‌ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದು, ಆದರೂ, ಅವರ ಬಗೆಯೇ ಎಷ್ಟು ಅಭಿಮಾನದಿಂದ ಮಾತನಾಡಿಸುತ್ತಾರೆ. ಹಾಡು ಹಾಡಿ, ದುಡ್ಡನ್ನು ತೆಗೆದುಕೊಳ್ಳಲಿಲ್ಲ. ಸಿನಿಮಾದವರು ಕೇಳಿದ್ರು. ದಯಾನಂದ್ ಇದ್ದಾರೆ, ಅವರಿಗೋಸ್ಕರ ಹಾಡಿರುವುದು. ಬೇಡ ಎಂದು ಒಂದು ರೂಪಾಯಿ ಕೂಡ ತೆಗೆದುಕೊಳ್ಳಲಿಲ್ಲ.ಮುಂದುವರೆಯುವುದು...

15 views