ಉಪೇಂದ್ರ ಶಾಸ್ತ್ರಿ ಅವರ ಗೆಳೆತನ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-16
ಉಪೇಂದ್ರ ಅವರು ಶಾಸ್ತ್ರಿ ಅವರಿಗೆ ಆತ್ಮೀಯ ಗೆಳೆಯ. ಇವರೆಲ್ಲ ಬ್ಯಾಚುಲರ್ಸ್‌ ಆಗಿದ್ದಾಗ ಒಟ್ಟಿಗೆ ಇದ್ದವರು. ಶಾಸ್ತ್ರಿ, ಮುರುಳಿ ಮೋಹನ್, ಉಪೇಂದ್ರ, ವಿ. ಮನೋಹರ್‌ ಮತ್ತೆ ಇನ್ನೊಬ್ಬರು ಇದ್ರು. ಅವರ ಹೆಸರು ಈಗ ಮರೆತಿದ್ದೇನೆ. ಒಟ್ಟಿಗೆ ಎಲ್ಲರೂ ಬರ್ಮಾ ಬಜಾರ್‌, ಮೆಜೆಸ್ಟಿಕ್‌ ಸುತ್ತು ಹಾಕುತ್ತಿದ್ದರಂತೆ. ಯಾರಾದರೂ, ಒಂದು ಕನ್ನಡಕ ತೆಗೆದುಕೊಂಡರೆ ಎಲ್ಲರೂ ಅದೇ ರೀತಿಯದ್ದು ತೆಗೆದುಕೊಂಡು ಸುತ್ತಾಡುತ್ತಿದ್ದರಂತೆ. ಆಗಿನ ಅವರ ಜೀವನ ಬಹಳ ಚೆನ್ನಾಗಿತ್ತು. ಯಾಕ್ರಿ ಸುಮ್ನೆ ಮದುವೆಯಾದ್ರಿ ಎಂದು ನಾನು ಹೇಳುತ್ತಿದ್ದೆ. ಶಾಸ್ತ್ರಿ ತೀರಿ ಹೋದಾಗ ಅಂತ್ಯಕ್ರಿಯೆಗೆ ಉಪೇಂದ್ರ, ಮನೋಹರ್‌, ಸಾಧು ಕೋಕಿಲ ಸೇರಿದಂತೆ ಹಲವರು ಬಂದಿದ್ದರು.


ಸಾಧು ಕೋಕಿಲ ಮತ್ತು ಗಾಯಕ ಹೇಮಂತ್ ಅವರು ಶಾಸ್ತ್ರಿ ಅವರಿಗೆ ಆತ್ಮೀಯರು. ಶಾಸ್ತ್ರಿ ಅವರು ನನ್ನ ದೊಡ್ಡ ಮಗ ಎಂದೇ ಹೇಮಂತ್‌ ಅಪ್ಪ ಹೇಳುತ್ತಿದ್ದರು. ಹೇಮಂತ್‌ ಅವರ ಕಷ್ಟಕಾಲದಲ್ಲಿ ಶಾಸ್ತ್ರಿ ಅವರು ನೆರವಾಗಿದ್ದರು. ಶಾಸ್ತ್ರಿ ಅವರಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಹೇಮಂತ್‌ ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ.ಮುಂದುವರೆಯುವುದು...

19 views