ಊಟಕ್ಕೆ ಪರದಾಡೋ ಟೈಮ್‌ ಅಲ್ಲಿ ಕೈ ಹಿಡಿದಿದ್ದು ನಾಟಕ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 8

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)“ಇನ್ನು ನಾವು ಏನ್ಮಾಡೊದು?” ಅಂತ ನಮ್ಮ ಪಯಣ ಶುರುವಾಗ್ಬಿಡ್ತು. ಆಗ ವೀರ ಸಿಂಧೂರ ಲಕ್ಷ್ಮಣ ಅಂತ ಹೇಳಿ ಒಂದು ನಾಟಕ ಸೊಳ್ಳೇ ದೇಸಾಯಿ ಅವರ ಕಂಪೆನಿ ಹಾಗೂ ಗುಡಿಗೇರಿ ಅವರ ಕಂಪೆನಿಯಲ್ಲಿ ಎರಡು ನಾಟಕ ಮಾಡ್ತಾ ಇದ್ರು. ಸುಳ್ಳೇ ದೇಸಾಯಿಯವರ ಕಂಪೆನಿಯಲ್ಲಿ ಮಾಡುತಿದ್ದ ಹೀರೋ ನಟನ ಗುಡಿಗೇರಿ ಕಂಪೆನಿಯವರು ಓಡಿಸ್ಕೊಂಡೋಗ್ಬಿಟ್ರು. ಅವಾಗ ಯಾವುದಾದ್ರೂ ಕಂಪೆನಿಯಲ್ಲಿ ಒಳ್ಳೆ ನಟರು ಇದ್ದಾರೆ ಅಂದ್ರೆ ಅವರನ್ನ ಓಡಿಸ್ಕೊಂಡೋಗುವಂತಹ ಒಂದು ವಾಡಿಕೆ ಇತ್ತು. “ಅವರಿಗೆ ಕಲೆಕ್ಷನ್ ಆಗ್ಬಾರ್ದು, ನಮಗೆ ಕಲೆಕ್ಷನ್ ಆಗ್ಬೇಕು, ನಾವು ಟಾಪಲ್ಲಿ ಇರ್ಬೇಕು” ಅಂತ.


ಪರಮ್: ಕಾಂಪಿಟೇಶನ್?


ಮಾಲತಿ ಸುಧೀರ್: ಹೌದು ಕಾಂಪಿಟೇಶನ್. ಅವಾಗ ಸುಳ್ಳೇ ದೇಸಾಯಿ ಅವರ ಕಂಪೆನಿ ಬಿದ್ದೋಯ್ತು. ಅವಾಗ ಯಾರು ಸಿಕ್ತಾರೆ ನಾಯಕನ ಪಾತ್ರ ಮಾಡುವವರು ಅಂತ ಹುಡುಕ್ತಾ ಇದ್ರು. ಮತ್ತೆ ಹಳೆಗನ್ನಡದ ಹಾಗೆ ಆ ಕಡೆಯ ಭಾಷೆ ಗೊತ್ತಿರ್ಬೇಕು. ಅವಾಗ ಯಾರೋ ಒಬ್ರು “ಸುಧೀರ್ ಅವರಿಗೆ ಒಳ್ಳೆ ಪರ್ಸನಾಲಿಟಿ ಇದೆ. ಅವರನ್ನೇ ಹಾಕೊಳಿ” ಅಂತ ಹೇಳಿದಾರೆ.ಮುಂದುವರೆಯುವುದು…

12 views