ಊಟದ ಬಗ್ಗೆ ತುಂಬಾ ಪರ್ಟಿಕ್ಯುಲರ್‌ ನಮ್ಮ ಪ್ರೊಡ್ಯಸರ್!!!

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 120

(ಮಾಲ್ಗುಡಿ ಡೇಸ್‌ ಕ್ಯಾಮರಾ ಅಸಿಸ್ಟೆಂಟ್‌ ನಾಗರಾಜ ಆದವಾನಿ ಅವರ ನೆನಪುಗಳು)ಪರಮ್: ಆಗುಂಬೆ ಬಗ್ಗೆ ಹೇಳಿ ಸರ್, ಜನ ಹೇಗೆ ಸಪೋರ್ಟ್ ಮಾಡ್ತಿದ್ರು? ಯಾವಾಗ್ಲೂ ಕ್ಯಾಮರಾಗೆ ಲೈಟ್ ನೋಡ್ತಿರ್ತಿದ್ರಿ. ಸೋ ಆಗುಂಬೆ ರಿಸಲ್ಟ್ ಹೇಗಿತ್ತು?


ನಾಗರಾಜ್: ಆಗುಂಬೆಯ ವೆದರ್ ತುಂಬಾ ಚೆನ್ನಾಗಿತ್ತು. ತುಂಬಾ ಕ್ಲೌಡಿ ಇರೋದು. ಮಳೆ ಜಾಸ್ತಿನೇ ಇರ್ತಿತ್ತು. ಮಳೆಯಲ್ಲೇ ನಾವು ಕೆಲ್ಸ ಮಾಡ್ಬೇಕಾಗಿತ್ತು. ನಿರ್ಮಾಪಕರು ಎಲ್ಲಾ ವ್ಯವಸ್ಥೆನ ಅಲ್ಲೇ ಮಾಡಿದ್ರು, ಯಾರಿಗಾದ್ರೂ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಕೂಡಲೇ ಕರ್ಕೊಂಡು ಹೋಗಿ ಡಾಕ್ಟರ್ ಗೆ ತೋರ್ಸತಿದ್ರು. ಡಿಸಲ್ ಅಂತೂ ಡ್ರಮ್ ಗಟ್ಟಲೆ ಇರ್ತಿತ್ತು. ಊಟನೂ ಅಷ್ಟೇ ಅಚ್ಚುಕಟ್ಟಾಗಿ ಮಾಡಿಸ್ತಿದ್ರು. ನರಸಿಂಹನ್ ಊಟದ ಬಗ್ಗೆ ತುಂಬಾ ಪರ್ಟಿಕ್ಯುಲರ್ ಆಗಿ ಇರ್ತಿದ್ರು ಅವ್ರು. ಒಳ್ಳೆ ಕ್ವಾಲಿಟಿ ಆಯಿಲೇ ಯೂಸ್ ಮಾಡ್ಬೇಕು. ಹಾಗೆ ನಿರ್ಮಾಪಕರು ಪ್ರತಿಯೊಂದು ಟೆಕ್ನೀಷಿಯನ್ನೂ ತುಂಬಾ ಚೆನ್ನಾಗಿ ನೋಡ್ಕೊತಾ ಇದ್ರು. ಶಂಕರ್ ಅವ್ರಿಗೆ ಯಾವುದೇ ತರಹದ ಭೇದ ಭಾವ ಇರ್ಲಿಲ್ಲ. ನಾನು ಹೀರೋ, ಅನಂತ್ ನಾಗ್ ಹೀರೋ ಆತರ ಏನೂ ಇರ್ತಾ ಇರ್ಲಿಲ್ಲ ಅಲ್ಲಿ. ಎಲ್ಲರೂ ಸಮಾನರೇ ಅಲ್ಲಿ. ಎಲ್ಲರೂ ಒಟ್ಟಿಗೆ ಊಟಕ್ಕೆ ಕೂತ್ಕೊತಾ ಇದ್ರು. ಅವ್ರೇ ಬಂದು ಎಲ್ಲಾ ಬಡಿಸೊದು ಎಲ್ಲಾ ಮಾಡ್ತಿದ್ರು.


ಮುಂದುವರೆಯುವುದು…

23 views