ಎಲ್. ಎನ್‌ ಶಾಸ್ತ್ರಿ ಅವರಿಗೆ ಈ ವಿಶೇಷ ವ್ಯಕ್ತಿತ್ವ ಇತ್ತು

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-1
ಎಲ್‌.ಎನ್‌ ಶಾಸ್ತ್ರಿ ಅವರದು ವಿಶೇಷ ವ್ಯಕ್ತಿತ್ವ. ನನ್ನ ಜೀವನ ಪರ್ಯಾಂತ ಅವರನ್ನು ಒಬ್ಬ ಅದ್ಭುತ ಕಲಾವಿದನಾಗಿಯೇ ಕಂಡಿದ್ದೇನೆ. ಅವರದು ಬಹಳ ಮುಗ್ಧ ಮನಸು. ಮಗು ಸ್ವಭಾವ ಅವರದು. ಅವರ ಬಾಲ್ಯದ ಪ್ರತಿಯೊಂದು ಘಟನೆಗಳನ್ನು ಚಾಚುತಪ್ಪದೇ ಆತ್ಮೀಯ ಗೆಳೆಯನ ಬಳಿ ಹೇಳುವಂತೆ ನನ್ನ ಜೊತೆಗೆ ಹಂಚಿಕೊಳ್ಳುತ್ತಿದ್ದರು.


ಈರ್ಷೆಯೇ ಇಲ್ಲದ್ದಂತಹ ವ್ಯಕ್ತಿತ್ವ ಅವರದು. ಅವರ ಈ ಸ್ವಭಾವ ನನಗೆ ಬಹಳ ಆಶ್ಚರ್ಯ ತರಿಸುತ್ತಿತ್ತು. ನಿಜ ಹೇಳಬೇಕೆಂದರೆ ನನ್ನಲ್ಲೂ ಈರ್ಷೆ ಇತ್ತು. ಯಾರಾದರೂ ನನಗಿಂತ ಚೆನ್ನಾಗಿ ಹಾಡಿದರೆ, ಮನಸ್ಸಿನಲ್ಲಿ ಏನೋ ಒಂದು ರೀತಿಯ ಭಾವ ಬರುತ್ತಿತ್ತು. ಆಮೇಲೆ ನಾನೇ ಹಾಗೆಲ್ಲ ಅಂದುಕೊಳ್ಳಬಾರದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ.


ಆದರೆ ಶಾಸ್ತ್ರಿಗೆ ಈ ಗುಣವೇ ಇರಲಿಲ್ಲ. ಯಾರಾದರೂ ಚೆನ್ನಾಗಿ ಹಾಡಿದರೆ, ಹೋಗಿ ಕಾಲು ಹಿಡಿದುಕೊಳ್ಳುತ್ತಿದ್ದರು. ಸಮಾನ ವಯಸ್ಕರಾದರೇ ತಬ್ಬಿಕೊಂಡು ಬಿಡುತ್ತಿದ್ದರು. ತನ್ನ ಜಾಗವನ್ನು ಬಿಟ್ಟು, ಹೋಗಪ್ಪ ಮುಂದೆ ನೀನು ತುಂಬಾ ಚೆನ್ನಾಗಿ ಹಾಡುತ್ತಿದ್ದೀಯಾ ಎಂದು ದಾರಿ ಮಾಡಿಕೊಡುವಂತಹ ವ್ಯಕ್ತಿತ್ವ ಅವರದು. ಕಲಾವಿದರಲ್ಲಿ ಇಂತಹ ಗುಣವನ್ನು ಪ್ರಪ್ರಥಮವಾಗಿ ಶಾಸ್ತ್ರಿಯಲ್ಲಿ ಮಾತ್ರವೇ ಕಂಡದ್ದು ನಾನು. ಅವರು ದೈವಾಂಶ ಸಂಭೂತ ಕಲಾವಿದರು ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಕಂಡಂತೆ ಕಲಾವಿದರಲ್ಲಿ ಸಾಮಾನ್ಯವಾಗಿ ಈರ್ಷೆ ಇದ್ದೇ ಇರುತ್ತದೆ. ರಾಜೇಶ್‌ ಕೃಷ್ಣ, ಅರ್ಜುನ್‌ ಜನ್ಯ, ನಾಗೇಂದ್ರ ಪ್ರಸಾದ್‌ ಮತ್ತು ಶಾಸ್ತ್ರಿ ಅವರ ಗುರು ಹಂಸಲೇಖ. ಮನೋಹರ್‌ ಅವರ ಬಳಿ ಶಾಸ್ತ್ರಿ ಅವರ ಪತ್ನಿ ಈ ಗುಣವನ್ನು ಹೇಳಿದ್ರು ಹೌದಾ ಎಂದು ಕೇಳಿ? ಅವರೆಲ್ಲ ಇನ್ನೊಮ್ಮೆ ಯೋಚಿಸಿದೇ ಹೌದು ಎಂದು ಹೇಳುತ್ತಾರೆ.ಮುಂದುವರೆಯುವುದು...

16 views