ಎಲ್‌.ಎನ್ ಶಾಸ್ತ್ರಿ‌ ಅವರ ಲವ್‌ ಪ್ರಫೋಸಲ್‌ ಸ್ಟೈಲ್‌

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-8ಹಂಸಲೇಖ ಅವರ ರೆಕಾರ್ಡಿಂಗ್‌ ಇದ್ದರೆ, ಶಾಸ್ತ್ರಿ ಅವರೇ ನನ್ನನ್ನು ಕರೆದುಕೊಂಡು ಹೋಗುವುದು ಬಿಡುವುದು ಮಾಡುತ್ತಿದ್ದರು. ಸಂಕೇತ್‌ ಸ್ಟುಡಿಯೊದಲ್ಲಿ ರೆಕಾರ್ಡಿಂಗ್ ಇತ್ತು. ಮುಗಿಸಿಕೊಂಡು ಹೊರಡಬೇಕಾದರೆ ಶಾಸ್ತ್ರಿ ಡೈನಿಂಗ್‌ ಹಾಲ್‌ನಲ್ಲಿದ್ದರು. ಹೋಗಿ ಬರುತ್ತೇನೆ ಎಂದು ಹೇಳಲು ಹೋದೆ. ಅಲ್ಲಿ ಸಿದ್ಧ ಎಂಬ ಹುಡುಗ ಇದ್ದ. ಈಗಲೂ ಅಲ್ಲಿ ಇದ್ದಾನೆ ಅವನು. ಶಾಸ್ತ್ರಿ ಬಳಿ ಅವನು, ಏನು ನಿಮ್ಮ ಬಳಿ ಮಾತ್ರ ಪರ್ಟಿಕ್ಯುಲರ್‌ ಆಗಿ ಹೇಳಿ ಹೋಗ್ತಿದ್ದಾರೆ, ಏನೋ ಇರಬೇಕು ನಿಮ್ದು ಎಂದನಂತೆ. ಅದಕ್ಕಿವರು ನಿನಗೆ ತಲೆ ಸರಿ ಇದೆಯಾ?, ಏನಿಲ್ಲ ಪಾಪ ಆ ಹುಡುಗಿ ಎಂದರಂತೆ. ಆದರೆ, ಇವರಿಗೆ ಆಗ ಮನಸ್ಸಿಗೆ ಏನೋ ಭಾವನೆ ಬಂದಿದೆ. ಅವನು ಹೇಳದಿದ್ದರೆ ನನಗೆ ಹಾಗೆ ಅನಿಸುತ್ತಲೇ ಇರಲಿಲ್ಲ. ಅವನು ಹೇಳಿದ ಮೇಲೆ, ಯಾಕೆ ಆಗಬಾರದು. ಟ್ರೈ ಮಾಡಬಹುದಲ್ವಾ ಅನಿಸಿತು ಅನ್ನುತ್ತಿದ್ದರು. ನಂತರ ಅವರು ಪ್ರಪೋಸ್‌ ಮಾಡಿದ್ರು. ಆದರೆ, ನಾನು ಮದುವೆ ಆಗುವುದಿಲ್ಲ. ಸಂಗೀತದಲ್ಲಿ ಸಾಧನೆ ಮಾಡಬೇಕೆಂಬುದೇ ನನ್ನ ಹಂಬಲ. ಲತಾ ಮಂಗೇಶ್ವರ್‌ ಅವರೇ ನನ್ನ ಮಾದರಿ. ಅವರ ತರಹ ಆಗಬೇಕೆಂಬ ಆಸೆ ನನಗೆ. ಫ್ಯಾಮಿಲಿ ಬರ್ಡನ್‌ ಬೇಡ ನನಗೆ. ನಿಮ್ಮಲ್ಲಿ ನನಗೆ ಯಾವ ದೋಷವು ಕಂಡಿಲ್ಲ, ಕ್ಷಮಿಸಿ ಎಂದೆ. ಅದಕ್ಕವರು ನಾನು ಪ್ರೋತ್ಸಾಹ ಕೊಡುತ್ತೇನೆ. ನಾನು ಅದೇ ಕ್ಷೇತ್ರದಲ್ಲಿಯೇ ಇರುವುದಲ್ವಾ ಎಂದ್ರು. ಇಲ್ಲ ಸರ್‌ ಎಂದು ಒಪ್ಪದೇ ಹೋದೆ.


ಒಂದು ದಿನ ಅವರು ಮಂಕಾಗಿ ಇದ್ದರಂತೆ. ಅಳಲು ಶುರು ಮಾಡಿಕೊಂಡರಂತೆ. ಮನೋಹರ್‌ ಅವರಿಗೆ ಬಹಳ ಬೇಜಾರಾಗಿ, ಮೂರ್ನಾಲ್ಕು ಜನ ಒಟ್ಟಿಗೆ ಉಡುಪಿಗೆ ಬಂದು, ಅಪ್ಪ, ಅಮ್ಮನ ಬಳಿ ವಿಷಯ ಹೇಳಿದ್ದಾರೆ. ಇದಕ್ಕಿಂತ ಒಳ್ಳೆಯ ಪ್ರಪೋಸಲ್‌ ಸಿಗಲ್ಲ ನಿನಗೆ. ಹುಡುಗ ಓದಿದ್ದಾನೆ. ಚೆನ್ನಾಗಿಯೂ ಇದ್ದಾನೆ. ನಿನ್ನದೇ ಕ್ಷೇತ್ರ. ಋಣಾನುಬಂಧ ಹುಡುಕಿಕೊಂಡು ಬಂದಾಗ ದುರಂಕಾರ ಮಾಡಬಾರದು ಎಂದು ಅಮ್ಮ ನನಗೆ ಹೇಳಿದರು. ನಂತರ ಒಪ್ಪಿದೆ. ಒಂದು ತಿಂಗಳೊಳಗೆ ಮದುವೆಯೂ ಆಗಿ ಹೋಯಿತು. ಅಕ್ಟೋಬರ್‌12 ರಂದು ನಮ್ಮ ಮದುವೆಯಾಯ್ತು.ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌. ಪರಮೇಶ್ವರ

11 views